ಬೀದರ್: ಭೀಕರ ರಸ್ತೆ ಅಪಘಾತದಲ್ಲಿ ಐವರು ಮಹಿಳೆಯರು ಮೃತ್ಯು

Update: 2022-11-04 17:04 GMT

ಬೀದರ್: ಟ್ರಕ್‌ ಹಾಗೂ ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಮಹಿಳೆಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮ್ಮಳಖೇಡ ಬಳಿ ಶುಕ್ರವಾರ ವರದಿಯಾಗಿದೆ.

ಮೃತರನ್ನು  ಜಕ್ಕಮ್ಮ (32), ಪ್ರಭಾವತಿ (36), ಯಾದಮ್ಮ (40), ರುಕ್ಮಿಣಿ (60) ಹಾಗೂ ಗುಂಡಮ್ಮ (52) ಎಂದು ಗುರುತಿಸಲಾದ್ದು, ಈ ಬಗ್ಗೆ ಬೆಮ್ಮಳಖೇಡ ಠಾಣೆಯ ಪೊಲೀಸರು ಮಾಹಿತಿ ನೀಡಿದರು.  

ವೇಗವಾಗಿ ಬಂದ ಟ್ರಕ್ ಆಟೋಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟು, ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಟೋದಲ್ಲಿದ್ದ ಇನ್ನೂ  6 ಮಂದಿಗೆ ಗಾಯಗಳಾಗಿದ್ದು ಅವರನ್ನು ಬೀದರ್‌, ಮನ್ನಾಖೇಳಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 

Similar News