ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ವಜ್ರಾಭರಣಗಳ ಪ್ರದರ್ಶನ, ಮಾರಾಟ ‘ವಿಶ್ವವಜ್ರ’ ಆರಂಭ

Update: 2022-11-06 15:51 GMT

ಶಿವಮೊಗ್ಗ : ದಕ್ಷಿಣ ಭಾರತದ ಅತ್ಯುಚ್ಛ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ‘ವಿಶ್ವ ವಜ್ರ’ ಶಿವಮೊಗ್ಗದಲ್ಲಿರುವ ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್ ಮಳಿಗೆಯಲ್ಲಿ ಆರಂಭವಾಗಿದೆ.

ಬಹುನಿರೀಕ್ಷಿತ ವಜ್ರಾಭರಣ ಪ್ರದರ್ಶನ ‘ವಿಶ್ವವಜ್ರ’ ಜಗತ್ತಿನಾದ್ಯಂತದ ಐಜಿಐ ಪ್ರಮಾಣೀಕೃತ ವಜ್ರಾಭರಣಗಳ 10 ಸಾವಿರ ಕ್ಯಾರೆಟ್‌ಗೂ ಅಧಿಕ ದಾಸ್ತಾನನ್ನು ಪ್ರದರ್ಶಿಸುತ್ತಿದೆ.

ಇಟಲಿ, ಫ್ರಾನ್ಸ್, ಟರ್ಕಿ, ಬೆಲ್ಜಿಯಂ, ಅಮೆರಿಕ, ಸಿಂಗಪುರ ಹಾಗೂ ಮಧ್ಯಪ್ರಾಚ್ಯದ ವಿಶೇಷ ಅಂತರ ರಾಷ್ಟ್ರೀಯ ಸಂಗ್ರಹ ಈ ಪ್ರದರ್ಶನದ ಮುಖ್ಯ ಆಕರ್ಷಣೆಯಾಗಿದೆ.

ಈ ಪ್ರದರ್ಶನವನ್ನು ನವೆಂಬರ್ 5ರಂದು ಸಂಜೆ ಶಿವಮೊಗ್ಗದ ಮೇಯರ್ ಶಿವ ಕುಮಾರ್ ಎಸ್. ಉದ್ಘಾಟಿಸಿದರು. ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್, ಶಿವಮೊಗ್ಗದ ಮಾಜಿ ಮೇಯರ್ ಮರಿಯಪ್ಪ, ಉದ್ಯಮಿ ಪುಷ್ಪ ಶಿವಕುಮಾರ್, ಬಿರೂರ್‌ನ ಎಲ್‌ಐಸಿ ಅಧಿಕಾರಿ ಪುಷ್ಪ ಶಶಿ ಕುಮಾರ್, ಶಿಕ್ಷಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೆಹರುನ್ನೀಸ, ಬೈರೆಗುಡ್ಡೆ ಎಸ್ಟೇಟ್‌ನ ಮಾಲಕ ಅಬ್ದುಲ್ ವಹೀದ್, ಬೈರೆಗುಡ್ಡೆ ಎಸ್ಟೇಟ್‌ನ ತಸೀನ್ ಸುಲ್ತಾನ್, ಹೊಟೇಲ್ ಅನ್ಮೋಲ್‌ನ ಜಾನಕಿ ಬಿ. ಲಿಲಾನಿ ಹಾಗೂ ಸ್ವರ್ಣ ಗುರುಮೂರ್ತಿ ಮೊದಲಾದ ಅತಿಥಿಗಳು ವಿವಿಧ ಸಂಗ್ರಹಗಳ ಪ್ರದರ್ಶನಗಳನ್ನು ಉದ್ಘಾಟಿಸಿದರು.

ಐಷಾರಾಮಿ ವಿಭಾಗದ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ವಿಶಿಷ್ಟ ಹಾಗೂ ವೈವಿಧ್ಯಮಯ ವಿಶೇಷ ಸೆಲೆಬ್ರಿಟಿಗಳ ಸಂಗ್ರಹದ ವಜ್ರಾಭರಣಗಳು ಲಭ್ಯವಿವೆ.

ದಿನ ಧರಿಸುವ ಹಗುರು ವಜ್ರದ ನೆಕ್ಲೇಸ್ 56 ಸಾವಿರ ರೂ.ನಿಂದ, ಹಗುರ ವಜ್ರದ ಬಳೆ 15 ಸಾವಿರ ರೂ.ನಿಂದ, ವಜ್ರದ ರಿಂಗ್ 6 ಸಾವಿರ ರೂ.ನಿಂದ ಹಾಗೂ ವಜ್ರದ ಮೂಗುತಿ 2 ಸಾವಿರ ರೂ.ನಿಂದ ಲಭ್ಯವಿದೆ.

ಶಿವಮೊಗ್ಗದ ಗೋಪಿ ಸರ್ಕಲ್‌ನ ಎಸ್‌ಕೆಎಂ ಪ್ಲಾಝಾದಲ್ಲಿರುವ ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್‌ನಲ್ಲಿ ನವೆಂಬರ್ 14ರ ವರೆಗೆ ಪ್ರತಿ ಡೈಮಂಡ್ ಕ್ಯಾರೆಟ್‌ಗೆ ಗ್ರಾಹಕರಿಗೆ 8 ಸಾವಿರ ರೂ. ರಿಯಾಯಿತಿ ದೊರೆಯಲಿದೆ ಎಂದು ಸುಲ್ತಾನ್ ಡೈಮಂಡ್ ಆ್ಯಂಡ್ ಗೋಲ್ಡ್‌ನ ಹೇಳಿಕೆ ತಿಳಿಸಿದೆ.

Similar News