ನನ್ನ ಹೇಳಿಕೆಗೆ ನಾನು ಬದ್ಧ, ತಪ್ಪೆಂದು ಸಾಬೀತುಪಡಿಸಿದರೆ ರಾಜೀನಾಮೆ ಕೊಡ್ತೀನಿ: ಸತೀಶ್ ಜಾರಕಿಹೊಳಿ

Update: 2022-11-08 11:29 GMT

ಬೆಳಗಾವಿ: 'ಹಿಂದೂ ಪದದ ಬಗ್ಗೆ ಶಬ್ಧಕೋಶದಲ್ಲಿ ಇರುವುದನ್ನು ಹೇಳಿದ್ದೇನೆ. ವಿಕಿಪೀಡಿಯಾದಲ್ಲಿ ಉಲ್ಲೇಖಿಸಿರುವುದನ್ನು ನಾನು ಹೇಳಿದ್ದೇನೆ ಅಷ್ಟೇ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. 

ಈ ಬಗ್ಗೆ ನಿನ್ನೆ (ಸೋಮವಾರ) ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ಸತೀಶ್ ಜಾರಕಿಹೊಳಿ ಅವರು, ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. 

''ಹಿಂದೂ ಎಂಬ ಪದವು ಪರ್ಷಿಯನ್‌ ಮೂಲದ್ದು ಎಂಬ ಮಾತಿಗೆ ನಾನು ಈಗಲೂ ಬದ್ಧ. 1963ರಲ್ಲಿ ಒಂದು ಶಬ್ದಕೋಶ ಹೊರತರಲಾಗಿದೆ. ವಿಕಿಪೀಡಿಯಾದಲ್ಲಿ ಉಲ್ಲೇಖಿಸಿರುವುದನ್ನು ನಾನು ಹೇಳಿದ್ದೇನೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆ'' ಎಂದು ಹೇಳಿದರು.

''ಹಿಂದೂ ಪದಕ್ಕೆ ಶಬ್ದಕೋಶದಲ್ಲಿ ಅಶ್ಲೀಲ ಎಂದು ಉಲ್ಲೇಖವಿದೆ. ಶಬ್ಧಕೋಶ, ವಿಕಿಪೀಡಿಯಾದಲ್ಲಿ ಇರುವುದನ್ನು ನಾನು ಹೇಳಿದ್ದೇನೆ'' ಎಂದು ಸಮರ್ಥಿಸಿಕೊಂಡಿದ್ದಾರೆ.   

Full View

Similar News