ಹೇಳಿಕೆಗೆ ಬದ್ಧ ಎಂದ ಸತೀಶ್ ಜಾರಕಿಹೊಳಿ, ಸ್ಪಷ್ಟನೆ ಕೇಳಿದ KPCC ಅಧ್ಯಕ್ಷ ಡಿಕೆಶಿ

ಹಿಂದೂ ಪದದ ಬಗ್ಗೆ ಹೇಳಿಕೆ ವಿಚಾರ

Update: 2022-11-08 13:20 GMT

ಹುಬ್ಬಳ್ಳಿ, ನ.8: ‘ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಅವರದು ವೈಯಕ್ತಿಕ ಹೇಳಿಕೆಯಾಗಿದ್ದು, ಇದನ್ನು ಪಕ್ಷ ಒಪ್ಪುವುದಿಲ್ಲ, ತಿರಸ್ಕರಿಸುತ್ತದೆ ಹಾಗೂ ಖಂಡಿಸುತ್ತದೆ. ನಮ್ಮ ಪಕ್ಷ ಬಹು ಧರ್ಮ, ಬಹುಭಾಷೆ ಒಪ್ಪುವ ಪಕ್ಷ. ಯಾರ ಭಾವನೆಗೂ ನಾವು ಧಕ್ಕೆ ತರಲು ಬಯಸುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಚಾರವಾಗಿ ಅವರಿಂದ ಸ್ಪಷ್ಟೀಕರಣವನ್ನು ಬಯಸುತ್ತೇವೆ. ಅವರು ತಮ್ಮ ಮನೆಯಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ, ಸಾರ್ವಜನಿಕವಾಗಿ ಮಾತನಾಡುವಾಗ ಹೀಗೆ ಆಗಬಾರದು’ ಎಂದು ಹೇಳಿದರು. 

ಹೇಳಿಕೆಗೆ ಬದ್ಧ ಎಂದ ಸತೀಶ್ ಜಾರಕಿಹೊಳಿ:

‘ಹಿಂದೂ’ ಎಂಬ ಪದವು ಪರ್ಷಿಯನ್ ಮೂಲದ್ದು ಎಂದು ನೀಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ವಿಕಿಪೀಡಿಯಾ ಹಾಗೂ 1963ರಲ್ಲಿ ಪ್ರಕಟವಾಗಿರುವ ಶಬ್ಧಕೋಶ(ಡಿಕ್ಷನರಿ)ದಲ್ಲಿ ಇರುವುದನ್ನು ನಾನು ಹೇಳಿದ್ದೇನೆ. ನಾನು ನೀಡಿರುವ ಹೇಳಿಕೆ ತಪ್ಪು ಎಂದು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕಷ್ಟೇ ಅಲ್ಲ, ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

Similar News