​ಕಾಂಗ್ರೆಸ್ ಪಕ್ಷದ ಟ್ವಿಟರ್ ಬ್ಲಾಕ್ ಆದೇಶವನ್ನು ತಳ್ಳಿಹಾಕಿದ ಕರ್ನಾಟಕ ಹೈಕೋರ್ಟ್

Update: 2022-11-08 14:02 GMT

ಬೆಂಗಳೂರು, ನ.8: ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಐಎನ್‌ಸಿ)ಹಾಗೂ ಅದರ ಭಾರತ್ ಜೋಡೊ ಯಾತ್ರೆಯ ಟ್ವಿಟರ್ ಹ್ಯಾಂಡಲ್‌ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್‌ಗೆ ನಿರ್ದೇಶಿಸಿದ್ದ ವಾಣಿಜ್ಯ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.

ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು @INCIndia ಮತ್ತು @BharatJodo ಟ್ವಿಟರ್ ಹ್ಯಾಂಡಲ್‌ಗಳನ್ನು ನಿರ್ಬಂಧಿಸಲು ಆದೇಶಿಸಿದ ನ್ಯಾಯಾಲಯದ ಆದೇಶವನ್ನು "ಶಿಕ್ಷಣಾತ್ಮಕ ಕ್ರಮ" ಎಂದು ಕರೆದಿದ್ದು, ಬುಧವಾರ ಮಧ್ಯಾಹ್ನದ ಮುನ್ನ ಕಾಂಗ್ರೆಸ್ ಪಕ್ಷವು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಆದೇಶದಲ್ಲಿ ಹೇಳಿದೆ.

ಕಾಂಗ್ರೆಸ್ ತನ್ನ ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಬುಧವಾರ ಮಧ್ಯಾಹ್ನದ ಮೊದಲು ಹಕ್ಕುಸ್ವಾಮ್ಯ ಉಲ್ಲಂಘಿಸಿದ ಹಾಡಿನ ಭಾಗವನ್ನು ಒಪ್ಪಿಕೊಂಡಿದೆ.

ವಿವಾದಾತ್ಮಕ ವಿಷಯಗಳನ್ನು ತೆಗೆದುಹಾಕುವ ಮೊದಲು ಟ್ವಿಟರ್ ಹ್ಯಾಂಡಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಒದಗಿಸುವಂತೆ ಹೈಕೋರ್ಟ್ ಕಾಂಗ್ರೆಸ್‌ ಗೆ ಆದೇಶಿಸಿದೆ.

'ಕೆಜಿಎಫ್ ಚಾಪ್ಟರ್ 2' ಚಿತ್ರದ 45 ಸೆಕೆಂಡುಗಳ ಹಕ್ಕುಸ್ವಾಮ್ಯದ ಸಂಗೀತವನ್ನು ಕಾಂಗ್ರೆಸ್ ಪಕ್ಷವು 'ಭಾರತ್ ಜೋಡೋ' ಹಾಡಿನಲ್ಲಿ ಬಳಸಿದೆ ಎಂದು ಎಂಆರ್‌ಟಿ ಸ್ಟುಡಿಯೋಸ್ ಸಲ್ಲಿಸಿದ ಮೊಕದ್ದಮೆಯಲ್ಲಿ ಕೆಳ ನ್ಯಾಯಾಲಯವು ಕಾಂಗ್ರೆಸ್‌ ಹಾಗೂ ಭಾರತ್‌ ಜೋಡೋ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಲು ಆದೇಶವನ್ನು ನೀಡಿತ್ತು.

ಮಂಗಳವಾರ ಸಂಜೆ ನಡೆದ ತುರ್ತು ವಿಚಾರಣೆಯಲ್ಲಿ, ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಪಿ.ಎನ್.ದೇಸಾಯಿ ಅವರ ವಿಭಾಗೀಯ ಪೀಠವು ಕೈಗೆತ್ತಿಕೊಂಡಿದೆ. ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಕೆಳ ನ್ಯಾಯಾಲಯದ ಸೋಮವಾರದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ಪರ ವಾದ ಮಂಡಿಸಿದರು.

Similar News