ಕುತೂಹಲ ಮೂಡಿಸಿದ JDS ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್- ಸಾ.ರಾ.ಮಹೇಶ್ ಭೇಟಿ

Update: 2022-11-08 15:28 GMT

ತುಮಕೂರು : ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಅವರು ಗುಬ್ಬಿಯ ಜೆಡಿಎಸ್‌ ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ದಿಢೀರ್ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. 

ಕಳೆದ ಎರಡು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಬುಕ್ಕಪಟ್ಟಣ ಹೋಬಳಿಯ ಜಾನಕಲ್‍ನಲ್ಲಿ ದೇವಸ್ಥಾನ ಒಂದರ ಉದ್ಘಾಟನೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು,  ಪಕ್ಷದ ಜಿಲ್ಲೆಯ ಕೆಲ ನಾಯಕರ ಜೊತೆ ಸಭೆ ನಡೆಸಿದ್ದಾಗ ಎಸ್.ಆರ್.ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾದರೆ ಗುಬ್ಬಿ, ತುರುವೇಕೆರೆ, ಕುಣಿಗಲ್ ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಜೆಡಿಎಸ್‍ಗೆ ಹಿನ್ನಡೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ಎಸ್.ಆರ್.ಶ್ರೀನಿವಾಸ್ ಅವರನ್ನು ವಾಪಸ್ಸು ಜೆಡಿಎಸ್‍ಗೆ ಕರೆ ತರುವ ಹಿನ್ನಲೆಯಲ್ಲಿ ಸಾ.ರಾ.ಮಹೇಶ್ ಅವರು ಎಸ್.ಆರ್.ಶ್ರೀನಿವಾಸ್ ಅವರ ಮನೆಗೆ ಭೇಟಿ ನೀಡಿ ಮಾತು ಕತೆ ನಡೆಸಿದರನ್ನಲಾಗುತ್ತಿದೆ.

ಇದನ್ನೂ ಓದಿ... ತುಮಕೂರು ಜಿಲ್ಲೆ ಪ್ರವೇಶಿಸಿದ ಭಾರತ್ ಜೋಡೊ ಯಾತ್ರೆ; JDS ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ ಭಾಗಿ

ಈ ಕುರಿತು ಸಾ.ರಾ.ಮಹೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ''ಎಸ್.ಆರ್.ಶ್ರೀನಿವಾಸ್ ಅವರು ಪಕ್ಷ ಬಿಟ್ಟರೆ ಜೆಡಿಎಸ್‍ಗೂ ನಷ್ಟವಾಗಲಿದೆ, ರಾಷ್ಟ್ರೀಯ ನಾಯಕರಾದ ದೇವೇಗೌಡರು ಮತ್ತು ಕಾರ್ಯಕರ್ತರು ತೀರ್ಮಾನ ಮಾಡಿದರೆ ಏನು ಬೇಕಾದರೂ ಆಗಬಹುದು. ನಾನು ವಾಸು ಮೊದಲಿನಿಂದಲೂ ಚೆನ್ನಾಗಿದ್ದೇವೆ ಆಗಾಗ ಮಾತನಾಡುತ್ತಲೇ ಇರುತ್ತೇವೆ, ರಾಜಕೀಯಕ್ಕಾಗಿ ಮಾತನಾಡಲಿಕ್ಕೆ ಬಂದಿಲ್ಲ, ಸೌಹಾರ್ಧ ಭೇಟಿಯಷ್ಟೇ'' ಎಂದು ಹೇಳಿದರು.

Similar News