GPS ಅಳವಡಿಕೆ; ಆ್ಯಂಬುಲೆನ್ಸ್ ತಯಾರಕರಿಗೆ ಹೈಕೋರ್ಟ್ ಸಲಹೆ

Update: 2022-11-08 16:59 GMT

ಬೆಂಗಳೂರು, ನ.8: ಕರ್ನಾಟಕದಲ್ಲಿ ತಯಾರಿಸಲ್ಪಡುವ ಆ್ಯಂಬುಲೆನ್ಸ್‍ಗಳಿಗೆ ಜಿಪಿಎಸ್ (GPS ) ಅಳವಡಿಸಲು ತಯಾರಕರಿಗೆ ನಿರ್ದೇಶಿಸುವಂತೆ ಸರಕಾರಕ್ಕೆ ಹೈಕೋರ್ಟ್ (Karnataka High Court) ಸಲಹೆ ನೀಡಿದೆ.

ಈ ಕುರಿತು ಭಾರತ್ ಪುನರುತ್ಥಾನ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಸಲಹೆ ನೀಡಿದೆ.

ಆ್ಯಂಬುಲೆನ್ಸ್‍ಗಳಲ್ಲಿ ಜಿಪಿಎಸ್ ಅಳವಡಿಕೆ ಕುರಿತಂತೆ ಪರಿಶೀಲಿಸಿ ವರದಿ ಸಲ್ಲಿಸಲು ಸಾರಿಗೆ ಮತ್ತು ಪ್ರಾದೇಶಿಕ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ ಎಂದು ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು. 

ಸುತ್ತೋಲೆ ಹೊರಡಿಸಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಸರಕಾರಕ್ಕೆ ನ್ಯಾಯಪೀಠವು ನಿರ್ದೇಶಿಸಿ, ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿತು.      

Similar News