ಚಿತ್ರದುರ್ಗ ಪತ್ರಕರ್ತನ ಪತ್ನಿ ಚಿಕಿತ್ಸೆಗೆ 2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ ಸಿಎಂ ಬೊಮ್ಮಯಿ

Update: 2022-11-09 09:02 GMT

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಂಘದ ಮನವಿ ಮೇರೆಗೆ ಚಿತ್ರದುರ್ಗ ಪತ್ರಕರ್ತನ ಪತ್ನಿ  ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  2 ಲಕ್ಷ ರೂ ಪರಿಹಾರ ಮಂಜೂರು ಮಾಡಿದ್ದಾರೆ.

ಚಿತ್ರದುರ್ಗ ಜನಾಶಯ ಪತ್ರಿಕೆಯ ಸಂಪಾದಕ ಗೋವಿಂದಪ್ಪ ಅವರ ಪತ್ನಿ ಭಾಗ್ಯ ಅವರು ಪಿಟ್ಯುಟರಿ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಸುಮಾರು 4.50 ಲಕ್ಷ ರೂ ವೆಚ್ಚ ಮಾಡಿಕೊಂಡಿದ್ದರು.

ಗೋವಿಂದಪ್ಪ ಕುಟುಂಬ ಸಂಕಷ್ಟದಲ್ಲಿರುವ ಕಾರಣ ಆ ಕುಟುಂಬಕ್ಕೆ ಆರ್ಥಿಕ ನೆರವು ಕೊಡಿಸುವಂತೆ ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರ ಅವರ ಗಮನಕ್ಕೆ ತಂದಿದ್ದರು. ಶ್ರೀಮತಿ ಭಾಗ್ಯ ಅವರಿಗೆ ನೆರವು ಕೋರಿ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಲ್ಲಿಸಿದ ಮನವಿಯನ್ನು ಪರಿಗಣಿಸಿರುವ ಮುಖ್ಯಮಂತ್ರಿ ಮಾನವೀಯ ದೃಷ್ಟಿಯಿಂದ  ಪರಿಹಾರ ಮಂಜೂರು ಮಾಡಿದ್ದಾರೆ.

ಪರಿಹಾರ ಮಂಜೂರು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೃತಜ್ಞತೆಗಳನ್ನು ಸಲ್ಲಿಸಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News