ತಡವಾಗಿ ಬೇಡಿಕೆ ಸಲ್ಲಿಸಿದ ಖಾಸಗಿ ಶಾಲೆಗೆ ಪಠ್ಯ ತಲುಪಿಲ್ಲ: ಶಿಕ್ಷಣ ಇಲಾಖೆ

Update: 2022-11-09 14:53 GMT

ಬೆಂಗಳೂರು, ನ. 9: ಪ್ರಸಕ್ತ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳನ್ನು ಬೇಡಿಕೆ ಅನ್ವಯ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಿತರಿಸಲಾಗಿದೆ. ಆದರೆ ತಡವಾಗಿ ಬೇಡಿಕೆ ನೀಡಿದ ಖಾಸಗಿ ಶಾಲೆಗೆ ಪಠ್ಯ ತಲುಪಿಸಿಲ್ಲ ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ. 

ಎಲ್ಲ ಖಾಸಗಿ ಶಾಲೆಗಳಿಗೂ ಶೇ.10ರಷ್ಟು ಮುಂಗಡ ಹಣವನ್ನು ಪಾವತಿಸಿ, ಪಠ್ಯಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಸಕಾಲದಲ್ಲಿ ಬೇಡಿಕೆಯನ್ನು ಸಲ್ಲಿಸಿದ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕವನ್ನು ತಲುಪಿಸಲಾಗಿದೆ. 1826 ಖಾಸಗಿ ಶಾಲೆಗಳು ಈ ವರ್ಷದ ಆಗಸ್ಟ್‍ನಲ್ಲಿ ಹೆಚ್ಚುವರಿಯಾಗಿ 5.46 ಲಕ್ಷ ಪಠ್ಯಪುಸ್ತಗಳಿಗೆ ಬೇಡಿಕೆ ಸಲ್ಲಿಸಿ, ಹಣ ಪಾವತಿಸಿವೆ. ಅದರಂತೆ ಮುದ್ರಕರಿಗೆ ಈ ಕುರಿತು ಕಾರ್ಯಾದೇಶ ನೀಡಲಾಗಿದೆ. 

ಒಟ್ಟು ಬೇಡಿಕೆಯ ಶೇ.60ರಷ್ಟು ಪುಸ್ತಕಗಳು ಈಗಾಗಲೇ ಬ್ಲಾಕ್ ಹಂತಕ್ಕೆ ತಲುಪಿವೆ. ಉಳಿದ ಪುಸ್ತಕಗಳನ್ನು ಒಂದು ವಾರದೊಳಗೆ ಖಾಸಗಿ ಶಾಲೆಗಳಿಗೆ ತಲುಪಿಸುತ್ತೇವೆ ಎಂದು ಶಿಕ್ಷಣ ಇಲಾಖೆಯು ಭರವಸೆ ನೀಡಿದೆ. 

Similar News