×
Ad

ಮಾಲೂರು | ಪಾರಿವಾಳ ಖರೀದಿ ವಿಚಾರದಲ್ಲಿ ಗಲಾಟೆ ಆರೋಪ: ಒಂದೇ ಕುಟುಂಬದ 7ಮಂದಿಯ ಮೇಲೆ ಚಾಕುವಿನಿಂದ ಇರಿತ

ಆರೋಪಿಯ ಬಂಧನ

Update: 2022-11-09 21:54 IST

ಮಾಲೂರು (ಕೋಲಾರ), ನ.9: ಒಂದೇ ಕುಟುಂಬದ 7ಮಂದಿಯ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ. 

ಮಂಗಳವಾರ ರಾತ್ರಿ ಪಟಾಲಮ್ಮ ಬಡಾವಣೆಯ ನಿವಾಸಿ ಪಾರಿವಾಳ (pigeon) ವ್ಯಾಪಾರ ಮಾಡುವ ನಾಗರಾಜ್ ಎಂಬವರ ತಮ್ಮ ರಾಮು ಬಳಿ ಪಾರಿವಾಳ ಖರೀದಿಸುವ ವಿಚಾರದಲ್ಲಿ ಇಮ್ರಾನ್‌ಖಾನ್ (21)ನಡುವೆ ಗಲಾಟೆಯಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ 7ಮಂದಿಗೆ ಆರೋಪಿ ಇಮ್ರಾನ್‌ಖಾನ್ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಘಟನೆಯಲ್ಲಿ ನಾಗರಾಜ್, ಪತ್ನಿ ಹೇಮಾವತಿ, ರಾಮು, ಪತ್ನಿ ಚಂದ್ರಕಲಾ ಮತ್ತು ಮಕ್ಕಳಾದ ರಾಜೇಶ್ವರಿ, ರೂಪಾ, ನಾಗವೇಣಿಗೆ ಮನಬಂದಂತೆ ಹಲ್ಲೆ ಮಾಡಿ, ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ.

ಗಾಯಗೊಂಡವರು ಮಾಲೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಮಾಲೂರು ಪೊಲೀಸರು ಮಂಗಳವಾರ ರಾತ್ರಿ ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Similar News