ದೇಶಪ್ರೇಮ, ಮಾದರಿ ಆಡಳಿತಕ್ಕೆ ಟಿಪ್ಪು ಹೆಸರುವಾಸಿ: ಎಚ್.ಡಿ.ದೇವೇಗೌಡ
ಟಿಪ್ಪು ಸುಲ್ತಾನರ ಜಯಂತಿಯ ಹಿನ್ನೆಲೆಯಲ್ಲಿ ನಮನ ಸಲ್ಲಿಸಿದ ಮಾಜಿ ಪ್ರಧಾನಿ
Update: 2022-11-10 15:07 IST
ಬೆಂಗಳೂರು, ನ.10: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಟಿಪ್ಪು ಸುಲ್ತಾನರ ಜಯಂತಿಯ ಹಿನ್ನೆಲೆಯಲ್ಲಿ ನಮನ ಸಲ್ಲಿಸಿದ್ದು, ದೇಶಪ್ರೇಮ, ಮಾದರಿ ಆಡಳಿತಕ್ಕೆ ಟಿಪ್ಪು ಹೆಸರುವಾಸಿ ಎಂದು ಕೊಂಡಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಶ್ರೀ ಟಿಪ್ಪು ಸುಲ್ತಾನರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ದೇಶಪ್ರೇಮ ಮತ್ತು ಮಾದರಿ ಆಡಳಿತಕ್ಕೆ ಹೆಸರುವಾಸಿಯಾದ ಟಿಪ್ಪುರವರನ್ನು ಇಂದು ಸ್ಮರಿಸೋಣ' ಎಂದು ಕರೆ ನೀಡಿದ್ದಾರೆ.
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ವೀರ ಪರಾಕ್ರಮಿ ಶ್ರೀ ಟಿಪ್ಪು ಸುಲ್ತಾನರ ಜಯಂತಿಯಂದು ಅವರಿಗೆ ನನ್ನ ಗೌರವಪೂರ್ವಕ ನಮನಗಳನ್ನು ಅರ್ಪಿಸುತ್ತೇನೆ. ದೇಶಪ್ರೇಮ ಮತ್ತು ಮಾದರಿ ಆಡಳಿತಕ್ಕೆ ಹೆಸರುವಾಸಿಯಾದ ಟಿಪ್ಪುರವರನ್ನು ಇಂದು ಸ್ಮರಿಸೋಣ. pic.twitter.com/Q7O7TyXn7J
— H D Devegowda (@H_D_Devegowda) November 10, 2022