ಶತ್ರುಗಳ ಮುಂದೆ ಮಂಡಿಯೂರದ ಜಗತ್ತಿನ ಏಕೈಕ ನಾಯಕ ಟಿಪ್ಪು ಸುಲ್ತಾನ್: BJP ಎಂಎಲ್ಸಿ ಎಚ್.ವಿಶ್ವನಾಥ್

''ಕನ್ನಡಿಗರ ಮನಸ್ಸಿನಿಂದ ಟಿಪ್ಪು ಹೆಸರು ತೆಗೆಯಲು ಸಾಧ್ಯವಿಲ್ಲ''

Update: 2022-11-10 15:06 GMT

ಮೈಸೂರು: ''ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪನೊಬ್ಬ ಅನ್ನಾಡಿ ಕಾರ್ಯಪ್ಪ. ಅವನಿಗೇನು ಗೊತ್ತು ಟಿಪ್ಪು (Tipu Sultan) ಚರಿತ್ರೆ?'' ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದ ರಾಜೀವ್ ನಗರ ಅಲ್ ಬದರ್ ಮೈದಾನದಲ್ಲಿ ಗುರುವಾರ ವಿವಿಧ ಸಂಘಟನೆಗಳು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

''ಸಂಸದ ಪ್ರತಾಪ್ ಸಿಂಹ 80 ಸಾವಿರ ಜನರನ್ನು ಟಿಪ್ಪು ಕೊಂದ ಸುಳ್ಳು ಸುಳ್ಳನ್ನೇ ಹೇಳುತ್ತಾರೆ. ಅಂದಿನ ಮೈಸೂರು ಸಂಸ್ಥಾನದ ಜನಸಂಖ್ಯೆ ಎಷ್ಟಿತ್ತು ಎನ್ನುವುದನ್ನು ಮೊದಲು ತಿಳಿಯಲಿ.  ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್, ರೈಲಿನ ಮೇಲೆ ಅವರ ಹೆಸರು ತೆಗೆದಿರಬಹುದು ಆದರೆ, ಸಮಸ್ತ ಕನ್ನಡಿಗರ ಮನಸ್ಸಿನಿಂದ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ'' ಎಂದು ಹೇಳಿದರು.

ಇದನ್ನೂ ಓದಿ... ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಿದ ಪಾಲಿಕೆ

''ಸುಳ್ಳು ಕತೆಗಳನ್ನು, ನಾಟಕಗಳನ್ನು ಸೃಷ್ಟಿಸಿ ಟಿಪ್ಪು ಹೆಸರಿಗೆ ಅಪಚಾರ ಮಾಡಲಾಗುತ್ತಿದೆ. ಎಂದಿಗೂ ಶತ್ರುಗಳ ಮುಂದೆ ಮಂಡಿಯೂರದ ಜಗತ್ತಿನ ಏಕೈಕ ನಾಯಕ ಟಿಪ್ಪು ಸುಲ್ತಾನ್, ಅನೇಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶೃಂಗೇರಿ ಮಠವನ್ನು ರಕ್ಷಿಸಿರುವುದಕ್ಕೆ ದಾಖಲೆಗಳು ಸಾಕ್ಷಿಯಾಗಿವೆ'' ಎಂದು ಹೇಳಿದರು.

Full View

Similar News