×
Ad

ಗುಜರಾತ್ ನಂತೆ ರಾಜ್ಯದಲ್ಲೂ ಹಿರಿಯರು ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯಬೇಕು: BJP ಸಂಸದ ಲೆಹರ್ ಸಿಂಗ್

Update: 2022-11-10 20:27 IST

ಬೆಂಗಳೂರು, ನ.10: ''ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಉಪಮುಖ್ಯಮಂತ್ರಿ ನಿತಿನ್‍ ಭಾಯ್ ಪಟೇಲ್, ಮಾಜಿ ಸಚಿವರಾದ ಭೂಪೇಂದ್ರ ಸಿನ್ಹಾ ಮತ್ತು ಪ್ರದೀಪ್‍ಸಿಂಗ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ. ಈ ತೀರ್ಮಾನವು ಕರ್ನಾಟಕಕ್ಕೂ ಮಾದರಿಯಾಗಬೇಕು'' ಎಂದು ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ (Lahar Singh Siroya) ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ''ಇದು ಅತ್ಯಂತ ಪ್ರಮುಖ ನಡೆ. ರಾಜಕೀಯದಲ್ಲಿ ತಲೆಮಾರಿನ ಬದಲಾವಣೆಗಾಗಿ ಹಿರಿಯ ರಾಜಕಾರಣಿಗಳು ಯುವ ಪೀಳಿಗೆಗೆ ಅವಕಾಶ ಮಾಡಿಕೊಟ್ಟು ಪ್ರಜಾತಂತ್ರ ವ್ಯವಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ. ಹಿರಿಯ ನಾಯಕರು ರಾಜ್ಯ ಹಾಗೂ ದೇಶದ ಹಿತಾಸಕ್ತಿಯಿಂದ ಯುವ ಜನತೆಗೆ ದಾರಿ ಮಾಡಿಕೊಡಬೇಕು'' ಎಂದು ಮನವಿ ಮಾಡಿದ್ದಾರೆ. 

ಇದನ್ನೂ ಓದಿ>>> ಮುರುಘಾ ಶರಣರ ವಿರುದ್ಧ ಪ್ರಕರಣ; ನಿಷ್ಪಕ್ಷಪಾತ ತನಿಖೆ ನಡೆಸಲು ಹೊರ ರಾಜ್ಯಕ್ಕೆ ವರ್ಗಾಯಿಸಿ: ಲೆಹರ್ ಸಿಂಗ್ ಆಗ್ರಹ

Similar News