'ಪ್ರಧಾನಿ ಕರೆಸಿ ಚುನಾವಣಾ ತಯಾರಿ ಮಾಡಿದರೂ ಖಾಲಿ ಕುರ್ಚಿ ದರ್ಶನ ಪಡೆದ BJP': ವಿಡಿಯೋ ಹಂಚಿಕೊಂಡ ಕಾಂಗ್ರೆಸ್

Update: 2022-11-12 08:31 GMT

ಬೆಂಗಳೂರು: ಶುಕ್ರವಾರ ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಸಾರ್ವಜನಿಕ  ಸಮಾವೇಶಕ್ಕೆ ಬಿಜೆಪಿ (BJP) ಹಣ ಕೊಟ್ಟು ಜನರನ್ನು ಕರೆತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಸಂಬಂಧ ಸಮಾವೇಶದ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರಸ್, ''ಜನತೆ ಸುಳ್ಳುಗಳನ್ನ ಎಷ್ಟು ದಿನ ಸಹಿಸಬಲ್ಲರು, ಟೊಳ್ಳುಗಳನ್ನ ಎಷ್ಟು ದಿನ ನಂಬಬಲ್ಲರು, #ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಪ್ರಧಾನಿ ಕರೆಸಿ ಚುನಾವಣಾ ತಯಾರಿ ಮಾಡಿದರೂ ಕುರ್ಚಿಗಳು ಖಾಲಿಯಾಗುತ್ತಿವೆ. #TroubleEngineSarkara ದ ಮೇಲೆ ಜನಸಮಾನ್ಯರಷ್ಟೇ ಅಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸತ್ತಿದ್ದಾರೆ'' ಎಂದು ಟೀಕಿಸಿದೆ. 

ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 4500 ಬಸ್: ಪ್ರಯಾಣಿಕರಿಗೆ ತೀವ್ರ ಅನಾನುಕೂಲ

''ಹಣ ನೀಡಿ ಜನರನ್ನೂ ಕರೆತಂದರು ಕುರ್ಚಿಗಳನ್ನೂ ತಂದರು, ಆದರೆ ಉಳಿದಿದ್ದು ಕುರ್ಚಿಗಳು ಮಾತ್ರ. ಜೀವವಿದ್ದಿದ್ದರೆ ಕುರ್ಚಿಗಳಿಗೂ ಜಿಗುಪ್ಸೆ ಹುಟ್ಟಿ ಎದ್ದು ಹೊರಡುತ್ತಿದ್ದವು ಬಿಜೆಪಿ ಗೆ ಖಾಲಿ ಕುರ್ಚಿಗಳೇ ಪ್ರೇಕ್ಷಕರು, ಕುರ್ಚಿಗಳು ಎದ್ದುಹೋಗುವುದಿಲ್ಲ ಎಂಬ ಖಾತರಿ ಇದೆ'' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. 

Similar News