×
Ad

ನಮ್ಮ ಜಿಲ್ಲೆಯವರೊಬ್ಬರು ಸಿಎಂ ಆಗಲಿ...: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ BJP ಶಾಸಕನ ಪ್ರತಿಕ್ರಿಯೆ

Update: 2022-11-14 12:18 IST

ಮೈಸೂರು: ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರವಿವಾರ ವಿಶೇಷ ಬಸ್ ಮೂಲಕ ಕೋಲಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ಈ ಬಗ್ಗೆ ಕೃಷ್ಣರಾಜ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಎಸ್​.ಎ ರಾಮದಾಸ್ ಪ್ರತಿಕ್ರಿಯಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ  ಎಸ್​.ಎ ರಾಮದಾಸ್, ''ಮುಖ್ಯಮಂತ್ರಿ ಅಭ್ಯರ್ಥಿಯಾದವರೊಬ್ಬರ ಚುನಾವಣಾ ಸ್ಪರ್ಧೆಯ ವಿಷಯ ಚರ್ಚೆಯ ವಿಚಾರವಾಗಿದ್ದು ಸರಿಯಲ್ಲ'' ಎಂದು ಹೇಳಿದ್ದಾರೆ.

''ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರವರ ಇಚ್ಚೆಯಾಗಿರುತ್ತದೆ. ಪಕ್ಷಾತೀತವಾಗಿ ಹೇಳಬೇಕೆಂದರೆ ನಮ್ಮ ಜಿಲ್ಲೆಯವರೊಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಸಿದ್ದರಾಮಯ್ಯ ಅವರು ಯಾವುದೇ ಪಕ್ಷದಲ್ಲಿದ್ದರೂ ನಮ್ಮ ಹಿರಿಯರು. ಅವರ ಬಗ್ಗೆ ನಮಗೆ ಗೌರವ ಇದೆ'' ಎಂದು ಹೇಳಿದರು. 

ರವಿವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿರುವ ಸಿದ್ದರಾಮಯ್ಯ ಅವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, '' ಹೈಕಮಾಂಡ್ ವರುಣಾ, ಕೋಲಾರ ಎಲ್ಲಿ ನಿಲ್ಲಿ ಎಂದು ಹೇಳುತ್ತದೋ ಅಲ್ಲಿ ನಿಲ್ಲುತ್ತೇನೆ. ಹೈಕಮಾಂಡ್ ಕೋಲಾರದಿಂದ ನಿಲ್ಲಿ ಅಂದರೆ ಇಲ್ಲೇ ನಾಮಪತ್ರ ಸಲ್ಲಿಸಬೇಕು ಅಲ್ವಾ?'' ಎಂದು ಹೇಳಿಕೆ ನೀಡಿದ್ದರು.  

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಆರೋಪ: ಬಿಜೆಪಿ ಮುಖಂಡ ಪೊಲೀಸ್ ವಶಕ್ಕೆ, ಬಿಡುಗಡೆ

Similar News