×
Ad

ರಾಷ್ಟ್ರೀಯ ಲೋಕ್ ಅದಾಲತ್ | ರಾಜ್ಯಾದ್ಯಂತ 14,77,285 ಲಕ್ಷ ಕೇಸ್ ಇತ್ಯರ್ಥ: ನ್ಯಾ.ವೀರಪ್ಪ

Update: 2022-11-14 22:32 IST

ಬೆಂಗಳೂರು, ನ.14: ರಾಜ್ಯಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ 2022ರ ನ.12ರಂದು ನಡೆದ ಮೆಗಾ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ದಾಖಲೆಯ 14,77,285 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ(ಕೆಎಸ್‍ಎಲ್‍ಎಸ್‍ಎ) ಕಾರ್ಯಕಾರಿ ಅಧ್ಯಕ್ಷರು ಹಾಗೂ ಕರ್ನಾಟಕ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.

ಸೋಮವಾರ ಹೈಕೋರ್ಟ್‍ನ ಹಿರಿಯ ನ್ಯಾ.ಬಿ.ವೀರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ಹಂಚಿಕೊಂಡರು. ಈ ಬಾರಿ 14,77,285 ಪ್ರಕರಣಗಳು ಇತ್ಯರ್ಥವಾಗಿರುವುದು ಸಾರ್ವಕಾಲಿಕ ದಾಖಲೆ ಎಂದರು.

ಅದಾಲತ್‍ನಲ್ಲಿ 1,75,900 ವ್ಯಾಜ್ಯ, 13,00,784 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥಗೊಂಡಿವೆ. 1282 ಕೋಟಿ ರೂ.ಪರಿಹಾರ ಸಂದಾಯ ಮಾಡಲಾಗಿದೆ. 4,18,775 ಟ್ರಾಫಿಕ್ ಚಲನ್ ಪ್ರಕರಣ ಇತ್ಯರ್ಥಗೊಂಡಿವೆ. 2,887 ಆಸ್ತಿ ವಿಭಾಗ ವ್ಯಾಜ್ಯ, 174ಕ್ಕೂ ಹೆಚ್ಚು ದಂಪತಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ ಎಂದು ನ್ಯಾ.ಬಿ.ವೀರಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ....  ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 5 ದಂಪತಿಗಳನ್ನು ಒಂದುಗೂಡಿಸಿದ ತುಮಕೂರು ಕೌಟುಂಬಿಕ ನ್ಯಾಯಾಲಯ

ಜನರು ಅನಗತ್ಯವಾಗಿ ವರ್ಷಾನುಗಟ್ಟಲೆ ನ್ಯಾಯಾಲಯಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಖರ್ಚಿಲ್ಲದೆ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ರಾಜಿ-ಸಂಧಾನ ಸೂಕ್ತ ವಿಧಾನ. ಕಕ್ಷಿದಾರರು ಅದಾಲತ್‍ಗಳ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೇಸ್‍ಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು, ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ' ಎಂದು ಕೆಎಸ್‍ಎಲ್‍ಎಸ್‍ಎ ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾ.ಬಿ.ವೀರಪ್ಪ ಹೇಳಿದ್ದಾರೆ. 

ಸಂಚಾರಿ ಪ್ರಕರಣಗಳು, ವಾಣಿಜ್ಯ ದಾವೆಗಳು, ಚೆಕ್ ಬೌನ್ಸ್, ಸತಿ-ಪತಿ ವಿಚ್ಛೇದನಾ ಕೇಸ್, ಕೌಟುಂಬಿಕ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

    

    

Similar News