×
Ad

KPTCL ನೇಮಕಾತಿಯಲ್ಲಿ ಅಕ್ರಮ ಪ್ರಕರಣ: ಮತ್ತೆ ನಾಲ್ವರ ಬಂಧನ

Update: 2022-11-16 21:13 IST

ಬೆಳಗಾವಿ, ನ.16: ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಮತ್ತೆ ನಾಲ್ವರನ್ನು ಗೋಕಾಕ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಎಲೆಕ್ಟ್ರಾನಿಕ್ ಡಿವೈಸ್ ಮಾಡಿಫೈ ಮಾಡಿ ಪರೀಕ್ಷಾರ್ಥಿಗಳಿಗೆ ಸರಬರಾಜು ಮಾಡಿದ್ದ ಓರ್ವ, ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ಪರೀಕ್ಷೆ ಬರೆದಿದ್ದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಲೆಂದೇ ವಿಶೇಷವಾಗಿ ಎಲೆಕ್ಟ್ರಾನಿಕ್ ಡಿವೈಸ್ ಮಾಡಿಫೈ ಮಾಡಿ ಪರೀಕ್ಷಾರ್ಥಿಗಳಿಗೆ ಚಿಪ್ ನೀಡಿದ್ದ ಮೂಡಲಗಿಯ ಮಂಜುನಾಥ ರಾಮಪ್ಪ ಮಾಳಿ(23) ಇವನ ಬಳಿ ಡಿವೈಸ್ ಖರೀದಿಸಿದ್ದ ಪರೀಕ್ಷಾರ್ಥಿಗಳಾದ ಅರಭಾವಿಯ ಪುಂಡಲಿಕ ಫಕೀರಪ್ಪ ಬನಾಜ (26), ಮೂಡಲಗಿಯ ಮಹಾದೇವ ಹಣಮಂತ ದಾಸನಾಳ ( 26), ಮಾರುತಿ ರಾಮಣ್ಣ ಹೊಲದವರ (27) ನಾಲ್ವರನ್ನು ಬಂಧಿಸಲಾಗಿದೆ. 

ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷಾ ಅಕ್ರಮದ ಸಂಬಂಧ ಈ ನಾಲ್ವರ ಬಂಧನದಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಚಿಪ್ ಬಳಸಿ ಪರೀಕ್ಷೆ ಬರೆದಿದ್ದ ಮೂವರು ಆರೋಪಿಗಳು.  

Similar News