ಕಿರುಕುಳ ನೀಡಿದ್ದಕ್ಕೆ 10 ಜನ ಪಕ್ಷ ಬಿಟ್ಟು ಹೋದರು, ನನ್ನನ್ನು ಬಿಟ್ಟುಬಿಡಿ: ಕಣ್ಣೀರಿಟ್ಟ BJP ಶಾಸಕ ಎಸ್​.ಎ.ರಾಮದಾಸ್

Update: 2022-11-17 10:54 GMT

ಮೈಸೂರು, ನ.17:  ಮೈಸೂರು ನಗರದ ಜೆಎಸ್‍ಎಸ್ ಕಾಲೇಜು ಬದಿಯ ಮೈಸೂರು- ನಂಜನಗೂಡು ರಸ್ತೆಯಲ್ಲಿ ನಿರ್ಮಿಸುತ್ತಿರುವ ನೂತನ ಬಸ್ ನಿಲ್ದಾಣದ ಬಗ್ಗೆ ವಿವಾದ ಸೃಷ್ಟಿಯಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಸ್​.ಎ.ರಾಮದಾಸ್ ಅವರು, 'ದಯವಿಟ್ಟು ನನ್ನ ಬಿಟ್ಟುಬಿಡಿ' ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ. 

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬಸ್ ನಿಲ್ದಾಣ ವಿಚಾರದಲ್ಲಿ ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಕೊಡಲಿ,  ನಷ್ಟದ ಹಣವನ್ನು ನನ್ನ ಸಂಬಳದಿಂದ ಭರಿಸುತ್ತೇನೆ' ಎಂದು ಹೇಳಿದರು. 

''ಶೆಲ್ಟರ್‌ ವಿವಾದಕ್ಕೆ ಸಂಬಂಧಿಸಿದಂತೆ  ತನಿಖೆ ನಡೆಸಲು ಸಮಿತಿ ರಚಿಸುವಂತೆ ಮನವಿ ಮಾಡಿದ್ದೇನೆ. ಸಮಿತಿ ಯಾವುದೇ ವರದಿ ಕೊಟ್ಟರೂ ಅದಕ್ಕೆ ಬದ್ಧ'' ಎಂದು ತಿಳಿಸಿದರು.  

'' ದಯಮಾಡಿ ನನ್ನನ್ನು ಬಿಟ್ಟು'':  ''30 ವರ್ಷಗಳ ಕಾಲದಲ್ಲಿ ಕಿರುಕುಳದಿಂದಾಗಿ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ನಾನೊಬ್ಬ ಇದ್ದೀನಿ, ನನ್ನನ್ನು ಬಿಟ್ಟು ಬಿಡಿ'' ಎಂದು ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. 

''ನಾನು ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತೇನೆ. ನನಗೆ ವಿವಾದಗಳು ಬೇಡ, ನಿಮ್ಮ ಸಹಕಾರವನ್ನೂ ಬಯಸುತ್ತೇನೆ'' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 

ಇದನ್ನೂ ಓದಿ... 'ವಿವಾದಿತ ಬಸ್‌ ನಿಲ್ದಾಣ ವಾರದೊಳಗೆ ​ತೆರವುಗೊಳಿಸಿ'; ಮೈಸೂರು ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್

ಇದನ್ನೂ ಓದಿ...    BJPvsBJP ಕಿಚ್ಚು ಎಷ್ಟಿದೆ ಎನ್ನಲು ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ: ಕಾಂಗ್ರೆಸ್ 

Similar News