ನಾನು ಮೋದಿ ಭಕ್ತ, ಬಹಿರಂಗವಾಗಿ ಹೇಳಿಕೊಳ್ಳಲು ನನಗೆ ಯಾವುದೇ ಸಂಕೋಚವಿಲ್ಲ: ನಟ ಅನಂತ್ ನಾಗ್

Update: 2022-11-17 09:42 GMT

ಬೆಂಗಳೂರು: 'ನಾನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭಕ್ತ, ಅದನ್ನು  ಬಹಿರಂಗವಾಗಿ ಹೇಳೋದಕ್ಕೆ ನನಗೆ ಯಾವುದೇ ಸಂಕೋಚವಿಲ್ಲ' ಎಂದು ನಟ ಅನಂತ್ ನಾಗ್ (Anant Nag) ಹೇಳಿದ್ದಾರೆ. 

ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು  ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಪತ್ರಿಕಾ ದಿನಾಚರಣೆ’ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. 

''ಮೋದಿಯವರು ಎಂಟೂವರೆ ವರ್ಷದಲ್ಲಿ ಒಮ್ಮೆಯೂ ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿ ನಾನು ಮನಸೋತಿದ್ದೇನೆ'' ಎಂದಿದ್ದಾರೆ.

''ಹದಿನಾಲ್ಕು ವರ್ಷ ಮುಖ್ಯಮಂತ್ರಿಯಾಗಿ, ಎಂಟೂವರೆ ವರ್ಷಗಳಿಂದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮಾಡಿರುವ ಕೆಲಸ ಕಾರ್ಯಗಳು ನನಗೆ ಇಷ್ಟ. ಹೀಗಾಗಿ ನಾನು ಮೋದಿಯವರ ಭಕ್ತ'' ಎಂದು ಹೇಳಿದ್ದಾರೆ. 

ಇದನ್ನೂ ಓದಿ: 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಸಿದ್ದರಾಮಯ್ಯ ಗೆಲ್ಲುತ್ತಾರೆ: ಡಿ.ಕೆ.ಶಿವಕುಮಾರ್

Similar News