ವಿವಾದಿತ ಮೈಸೂರು ತಂಗುದಾಣದ ಪರಿಶೀಲನೆಗೆ ತಜ್ಞರ ಸಮಿತಿ ರಚನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-11-17 13:11 GMT

ಬೆಂಗಳೂರು, ನ. 17: ‘ಮೈಸೂರಿನಲ್ಲಿ ತಂಗುದಾಣದ ವಿನ್ಯಾಸ ವಿವಾದದ ಬಗ್ಗೆ ಪರಿಶೀಲಿಸಲು ನಡೆಸಲು ತಜ್ಞರ ಸಮಿತಿರನ್ನು ರಚಿಸಲು ತಿಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಸ್ ತಂಗುದಾಣದ ವಿಷಯದಲ್ಲಿ ಸ್ಥಳೀಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಏಕೆ ಬಂದಿದೆ ಎಂದು ತಿಳಿಯುವುದಕ್ಕಿಂತ, ತಜ್ಞರ ಸಮಿತಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಣೆ ನೀಡಿದರು.

ದುರ್ಬಳಕೆ: ‘ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ 130ಕೋಟಿ ರೂ.ಖರ್ಚು ಮಾಡಿ, ಇಡೀ ಕರ್ನಾಟಕದ ಸಾಮಾಜಿಕ ಆರ್ಥಿಕ ಸಮೀಕ್ಷೆ ಎಂಬ ಹೆಸರಿನಲ್ಲಿ ಜಾತಿ, ಉಪಜಾತಿಗಳನ್ನು ಸೃಷ್ಟಿಸಿ, ದಾಖಲೆಗಳನ್ನು ಮಾಡಿ, ಆ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸದೆ, ಚುನಾವಣೆಯ ಉದ್ದೇಶಕ್ಕೆ ಕಾಂಗ್ರೆಸ್ ಬಳಸಿಕೊಂಡಿತು’ ಎಂದು ಅವರು ದೂರಿದರು.

‘ಈ ವಿಷಯದಲ್ಲಿ ಶಿಕ್ಷೆ ಮೊದಲು ಸಿದ್ದರಾಮಯ್ಯನವರ ಸರಕಾರಕ್ಕೆ ಮೊದಲು ಆಗಬೇಕು. ಪ್ರಸ್ತುತ ಈ ವಿಚಾರದಲ್ಲಿ ಸರಕಾರಕ್ಕೆ ಸಂಬಂಧಿಸಿರುವುದಿಲ್ಲ. ತಳಹಂತದಲ್ಲಿ ಈ ಕೆಲಸವಾಗಿದ್ದರೆ, ಸೂಕ್ತ ವಿಚಾರಣೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ’ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ, ರಾಮದಾಸ್‌ ಗೆ ಕಿರುಕುಳ ಕೊಡುವ ಶಕ್ತಿ ನನಗೆ ಇಲ್ಲ: ಪ್ರತಾಪ್ ಸಿಂಹ 

Similar News