ಚಿಕ್ಕಮಗಳೂರು | ಗುತ್ತಿಗೆದಾರನಿಂದ ಕಮಿಷನ್‌ ಬೇಡಿಕೆ ಪ್ರಕರಣ: ಕಡೂರು ತಾಪಂ ಪ್ರಭಾರ ಇಒ ಅಮಾನತು

ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್

Update: 2022-11-18 15:55 GMT

ಚಿಕ್ಕಮಗಳೂರು, ನ.18: ಜಿಲ್ಲೆಯ ಕಡೂರು ತಾಪಂ ಇಒ ವಿರುದ್ಧ ಕಮಿಷನ್ ಆರೋಪ ಹೊರಿಸಿ ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್ ಅವರ ಪ್ರಕರಣ ಸಂಬಂಧ ಜಿಪಂ ಸಿಇಒ ಅವರು ನೀಡಿದ ವರದಿ ಆಧರಿಸಿ ರಾಜ್ಯ ಸರಕಾರ ಹಿರಿಯ ಪಶುವೈದ್ಯಾಧಿಕಾರಿ ಹಾಗೂ ತಾಪಂ ಪ್ರಭಾರ ಇಒ ಡಾ.ದೇವರಾಜ್ ನಾಯಕ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್ ಅಮರಗೋಳ ಎಂಬವರು ಕೋವಿಡ್ ಸಂದರ್ಭದಲ್ಲಿ ಕಡೂರು ತಾಲೂಕಿಗೆ ಕೋವಿಡ್ ಪರಿಕರಗಳನ್ನು ಪೂರೈಕೆ ಮಾಡಿದ್ದು, ಇದರ ಬಿಲ್ ಅನ್ನು ಎರಡು ವರ್ಷ ಕಳೆದರೂ ಪಾವತಿ ಮಾಡಿರಲಿಲ್ಲ. ಈ ಸಂಬಂಧ ಕಡೂರು ತಾಪಂ ಪ್ರಭಾರ ಇಒ ಡಾ.ದೇವರಾಜ್ ನಾಯಕ್ ಅವರನ್ನು ವಿಚಾರಿಸಿದರೇ ಕಮೀಶನ್ ನೀಡಬೇಕೆಂದು ಹೇಳಿ ಎರಡು ವರ್ಷಗಳಿಂದ ಬಿಲ್ ಪಾವತಿಸದೇ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರ ಬಸವರಾಜ್ ಅವರು ರಾಷ್ಟ್ರಪತಿ, ಪ್ರಧಾನಿ ಹಾಗೂ ಸಿಎಂಗೆ ಒತ್ರ ಬರೆದು ಧಯಾಮರಣಕ್ಕೆ ಅನುಮತಿ ನೀಡಬೇಕು, ಇಲ್ಲವೇ ಬಿಲ್ ಪಾವತಿಸಬೇಕೆಂದು ಕೋರಿದ್ದರು.

ಅಲ್ಲದೇ ಈ ಪ್ರಕರಣ ಸಂಬಂಧ ಕಡೂರು ತಾಪಂ ಇಒ ಅವರು ಗುತ್ತಿಗೆದಾರನ ಬಳಿ ಕಮೀಶನ್ ಕೇಳುತ್ತಿರುವ ಮೊಬೈಲ್ ಆಡಿಯೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಈ ಆಡಿಯೋ ಸಂಬಂಧ ಚಿಕ್ಕಮಗಳೂರು ಜಿಪಂ ಸಿಇಒ ಅವರು ಪರಿಶೀಲನೆ ನಡೆಸಿ ಕಮೀಶನ್ ಕೇಳಿರುವುದು ಮೇಲ್ನೋಟಕ್ಕೆ ಸಾಭೀತಾದ ಹಿನ್ನೆಲೆಯಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಡೂರು ತಾಪಂ ಇಒ ಡಾ.ದೇವರಾಜ ನಾಯಕ್ ಅವರನ್ನು ಅಮಾನತು ಮಾಡಿ ಆದೇಶಿಸಿದೆ.

Similar News