×
Ad

ಸೈನಿಕರ ಜಮೀನು ವಾಪಸ್ ಕೊಡಿಸಲು ಕ್ರಮ ಕೈಗೊಳ್ಳದ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2022-11-18 21:45 IST

ಬೆಂಗಳೂರು, ನ.18: ಸೈನಿಕರ ಮಾಲಕತ್ವದ ಜಮೀನನ್ನು ಉಳುವವರಿಂದ ವಾಪಸ್ ಕೊಡಿಸಲು ಕ್ರಮ ಕೈಗೊಳ್ಳದ ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.  

ಜಮೀನು ಮರಳಿ ಪಡೆಯಲು ಕಳೆದ ನಾಲ್ಕು ದಶಕಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ಪುತ್ತೂರು ಬಳಿಯ ದರ್ಬೆ ಗ್ರಾಮದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದಿವಾನ ಗೋಪಾಲ ಕೃಷ್ಣ ಭಟ್ ನೆರವಿಗೆ ಧಾವಿಸಿರುವ ಹೈಕೋರ್ಟ್ ನ್ಯಾಯಪೀಠ, ಸೈನಿಕರ ಬಗ್ಗೆ ಅತ್ಯಂತ ಮುತುವರ್ಜಿಯಿಂದ ವರ್ತಿಸಬೇಕೆಂದು ಎಂದು ಪೀಠ ರಕ್ಷಣಾ ಇಲಾಖೆಯ ವರದಿಯ ಅಂಶವನ್ನು ಉಲ್ಲೇಖಿಸಿದೆ. ಅಲ್ಲದೆ,  ಹಿಡುವಳಿ ಕಾಯಿದೆಯಡಿಯಲ್ಲಿ ಉಳುವವನೇ ಒಡೆಯ ತತ್ವವು ಸೈನಿಕರಿಗೆ ಅನ್ವಯ ಆಗುವುದಿಲ್ಲ ಎಂದು ಹೇಳಿದೆ.

ತಮ್ಮ ಮಾಲಕತ್ವದಲ್ಲಿದ್ದ 4 ಎಕರೆಗೂ ಅಧೀನ ಜಮೀನು ವಾಪಸ್ ಕೊಡಿಸಬೇಕೆಂದು ಲೆಫ್ಟಿನೆಂಟ್ ಕರ್ನಲ್ ಕೃಷ್ಣಭಟ್ ಸರಕಾರಕ್ಕೆ ಮನವಿ ಮಾಡಿದ್ದರು. ಈ ಜಮೀನನ್ನು ಬಿಟ್ಟುಕೊಡುವಂತೆ ತಹಸೀಲ್ದಾರ್ ನಫೀಜಾ ಮತ್ತಿತರರಿಗೆ ನಿರ್ದೇಶಿಸಿದ್ದರು. ಆದರೆ, ತಹಸೀಲ್ದಾರ್ ಆದೇಶವನ್ನು ಪ್ರಶ್ನಿಸಿ ನಫೀಜಾ ಸೇರಿ ಒಟ್ಟು 23 ಜನರು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಅರ್ಜಿ ವಜಾಗೊಳಿಸಿರುವ ಪೀಠ, ಸೈನಿಕರನ್ನು ಗೌರವದಿಂದ ಕಾಣದೆ ಹೋದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.  

Similar News