ಮೋದಿ ಬಟನ್ ಒತ್ತಿದಾಗ ಹಣ ಹೋದದ್ದು ಭ್ರಷ್ಟರ ಜೇಬಿಗೆ: ಕಾಂಗ್ರೆಸ್ ವ್ಯಂಗ್ಯ

Update: 2022-11-18 17:44 GMT

ಬೆಂಗಳೂರು: ''ಧಾರವಾಡದಲ್ಲಿ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ ದುರ್ಬಳಕೆ ನಡೆದಿದ್ದು, ಜಿಲ್ಲೆಯಲ್ಲಿ ಸುಮಾರು 8874 ಅನರ್ಹ ರೈತರು ಪತ್ತೆಯಾಗಿದ್ದಾರೆ. ಧಾರವಾಢ ಒಂದರಲ್ಲೇ ಇಷ್ಟೊಂದು ಅಕ್ರಮ ನಡೆದಿರುವುವಾಗ ದೇಶದಾದ್ಯಂತ ಇನ್ನೆಷ್ಟು ಲೂಟಿಯಾಗಿರಬಹುದು'' ಎಂದು ಕಾಂಗ್ರೇಸ್ ಬಿಜೆಪಿ ಸರಕಾರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದೆ. 

''ಸಣ್ಣ ರೈತರಿಗೆ ಸಹಾಯಧನ ನೀಡಲು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆದರೆ ಅನರ್ಹ ರೈತರು ನೋಂದಣಿ ಮಾಡಿಕೊಂಡು ಹಣ ಪಡೆದಿದ್ದಾರೆ. ಇದು ಅರ್ಹ ರೈತರಿಗೆ ತಲುಪುತ್ತಿಲ್ಲ. ಮೋದಿ ಬಟನ್ ಒತ್ತಿದರೆ ರೈತರ ಖಾತೆಗೆ ಹಣ ಬೀಳುತ್ತದೆ ಎಂದು ಬಿಜೆಪಿ ಹೇಳುತ್ತಿತ್ತು. ಆದರೆ ಅಸಲಿಗೆ ಮೋದಿ ಬಟನ್ ಒತ್ತಿದಾಗ ಹಣ ಭ್ರಷ್ಟರ ಜೇಬಿಗೆ ಹೋಗಿದೆ'' ಎಂದು ಕಾಂಗ್ರೇಸ್ ವ್ಯಂಗ್ಯವಾಡಿದೆ. 

ಅನಧೀಕೃತವಾಗಿ ಪಡೆದಿರುವ ಹಣವನ್ನು ವಾಪಾಸ್ ಪಡೆಯಲು ಕೃಷಿ ಇಲಾಖೆಯು ಮುಂದಾಗಿದ್ದು, ಜಮೆಯಾಗಿರುವ ಹಣ ತಡೆಗೆ ಬ್ಯಾಂಕ್ ಗಳಿಗೆ ಮಾಹಿತಿ ನೀಡಲಾಗಿದೆ. ಕೆಲ ರೈತರಿಗೆ ಎರಡರಿಂದ ಮೂರು ಬಾರಿ ನೋಟಿಸ್ ನೀಡಲಾಗಿದ್ದು, ಆದರೂ ಹಣವನ್ನು ನೀಡಿಲ್ಲ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

Similar News