×
Ad

ಭಟ್ಕಳ | ಜೇನುನೊಣ ದಾಳಿ: ಮೂವರಿಗೆ ಗಾಯ

Update: 2022-11-19 15:53 IST

ಭಟ್ಕಳ: ಜೇನು ಗೂಡು ಕಟ್ಟಿದ್ದ ಮರದ ಕೊಂಬೆ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರ ಮೇಲೆ ಜೇನು ಹುಳುಗಳು ದಾಳಿ ನಡೆಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ತೆರ್ನಮಕ್ಕಿ ಸಬಾತಿಯಲ್ಲಿ ನಡೆದಿದೆ. 

ಜೇನು ಹುಳುಗಳಿಂದ ದಾಳಿಗೊಳಗಾದವರನ್ನು ವೆಂಕಟಪ್ಪ ಸುಕ್ರ ನಾಯ್ಕ, ಮಂಜಪ್ಪ ಸುಕ್ರ ನಾಯ್ಕ ಹಾಗೂ ಮನೆಯಲ್ಲಿದ್ದ ಓರ್ವ ಮಹಿಳೆ ಎಂದು ತಿಳಿದು ಬಂದಿದೆ. ಕಳೆದ ಹಲವಾರು ದಿನಗಳಿಂದ ಮನೆಯ ಸಮೀಪವಿರುವ ಮರವೊಂದರಲ್ಲಿ ಜೇನು ಗೂಡು ಕಟ್ಟಿಕೊಂಡಿತ್ತು. ಆದರೆ ಇಂದು ಆಕಸ್ಮಿಕವಾಗಿ  ಜೇನು ಗೂಡು ಕಟ್ಟಿದ ಮರದ ಕೊಂಬೆ ಕಟ್ಟಾಗಿ ಬಿದ್ದ ಪರಿಣಾಮ ಮನೆಯಲ್ಲಿದ್ದ ಮೂವರ ಮೇಲೆ ಜೇನು ಹುಳುಗಳು ದಾಳಿ ಮಾಡಿದೆ. ತಕ್ಷಣ ಅವರನ್ನು ಭಟ್ಕಳ  ಸರ್ಕಾರಿ ಆಸ್ಪತ್ರೆಗೆ ಕರೆತಂದು  ಚಿಕಿತ್ಸೆ ನೀಡಲಾಗಿದೆ

Similar News