ಮಂಗಳೂರಿನಲ್ಲಿ ಸ್ಫೋಟ ಪ್ರಕರಣ: ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-11-20 11:24 GMT

ಬಳ್ಳಾರಿ: ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟ (Mangaluru blast) ಪ್ರಕರಣ ನಡೆದಿದ್ದು, ಇದೊಂದು  ಭಯೋತ್ಪಾದಕ ಕೃತ್ಯ ಇರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಜಾಲವನ್ನು ಸರ್ಕಾರ ಬೇಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು.

ಅವರು ಇಂದು ಬಳ್ಳಾರಿಯ ಜೀವೃತ್ತ ಮೈದಾನ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ನಿನ್ನೆ ಸಂಜೆ ಮಂಗಳೂರಿನಲ್ಲಿ ಆಟೋದಲ್ಲಿ ಪ್ರೆಶರ್ ಕುಕ್ಕರ್ ನಲ್ಲಿ ಸ್ಪೋಟವಾಗಿದೆ. ಈ ಸಂದರ್ಭದಲ್ಲಿ ಆಟೋದ ಚಾಲಕ ಹಾಗೂ ಒಬ್ಬ ಪ್ರಾಯಾಣಿಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ನಡೆಸುತ್ತಿದ್ದಾರೆ. ಘಟನೆಗೆ ಎಲ್ ಇ ಡಿ ಇರುವಂತಹ ಸಲಕರಣೆಯ ಬಳಕೆಯಾಗಿದ್ದು, ವ್ಯಕ್ತಿಯ ಪರಿಶೋಧನೆ ವೇಳೆ, ಆತನ ಬಳಿಯಿದ್ದ ಆಧಾರ್ ಕಾರ್ಡ್ ನಕಲಿ ಎಂದು ತಿಳಿಯುತ್ತದೆ. ಆತನ ಕೆಲವು ನೈಜ್ಯ ವಿವರಗಳು ಲಭಿಸಿರುವುದರಿಂದ , ಇದೊಂದು ಭಯೋತ್ಪಾದನಾ ಘಟನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬರುತ್ತದೆ ಎಂದರು.

ಈಗಾಗಲೇ ರಾಷ್ಟ್ರೀಯ ತನಿಖಾ ದಳ ಹಾಗೂ ತನಿಖಾ ದಳ ಸ್ಥಳಕ್ಕೆ ತೆರಳಿದ್ದು, ಕರ್ನಾಟಕ ಪೊಲೀಸರೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವ್ಯಕ್ತಿಯು ಆಸ್ಪತ್ರೆಯಲ್ಲಿದ್ದು, ನಂತರ ಆ ವ್ಯಕ್ತಿಯಿಂದ ಮಾಹಿತಿ ಪಡೆಯಲಾಗುವುದು. ಆ ವ್ಯಕ್ತಿಯು ಕೊಯಂಬತ್ತೂರು ಸೇರಿದಂತೆ ಹತ್ತು ಹಲವಾರು ಸ್ಥಳಗಳಲ್ಲಿ ಓಡಾಡಿದ್ದು,  ವ್ಯಕ್ತಿಗೆ ಭಯೋತ್ಪಾದನೆಯ ಸಂಪರ್ಕವಿದ್ದು, ಇದು ಒಂದು ಭಯೋತ್ಪಾದಕ ಘಟನೆ ಇರಬಹುದು ಎಂಬು ಮೇಲ್ನೋಟಕ್ಕೆ ಕಂಡುಬರುತ್ತಿರುವ ಬಗ್ಗೆ ಪೊಲೀಸರು ತಿಳಿಸದಿದ್ದಾರೆ. ಪಿಎಫ್ಐ ಗೂ, ಈ ಘಟನೆಗೂ ಸಂಬಂಧ ಇರುವ ಬಗ್ಗೆ ಮಾಹಿತಿಯೂ ತನಿಖೆಯ ನಂತರ ತಿಳಿಯಲಿದೆ ಎಂದರು.

ಇದನ್ನೂ ಓದಿ: ಪ್ರೇಮರಾಜ್ ಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ: ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟನೆ

Similar News