ಮತಾಂತರ ವಿರೋಧಿ ಕಾಯ್ದೆ: ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮ.ಪ್ರ. ಸರಕಾರ

Update: 2022-11-20 17:24 GMT

ಜಬಲ್‌ಪುರ, ನ. 20: ಜಿಲ್ಲಾ ದಂಡಾಧಿಕಾರಿಗೆ ಮಾಹಿತಿ ನೀಡದೆ ವಿವಾಹವಾಗುವ ಅಂತರ್ ಧರ್ಮೀಯ ಜೋಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಂತೆ ತಡೆಯುವ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಮಧ್ಯ ಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.

ತಮ್ಮ ಸ್ವಂತ ಇಚ್ಛೆಯಂತೆ ವಿವಾಹವಾಗುವ ವಯಸ್ಕರನ್ನು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (ಎಂಪಿಎಫ್‌ಆರ್‌ಎ)ಯ ಸೆಕ್ಷನ್ 10ರ ಅಡಿಯಲ್ಲಿ ವಿಚಾರಣೆ ನಡೆಸದಂತೆ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ರಾಜ್ಯ ಸರಕಾರಕ್ಕೆ ನಿರ್ದೇಶಿಸಿತ್ತು.

ಎಂಪಿಎಫ್‌ಆರ್‌ಎ-2021ರ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾದ 7 ಮನವಿಗಳ ಗುಚ್ಛದ  ವಿಚಾರಣೆ ನಡೆಸಿ ಉಚ್ಚ ನ್ಯಾಯಾಲಯ ಈ ಆದೇಶ ನೀಡಿತ್ತು.

ಈ ಕಾಯ್ದೆಯ ಅಡಿಯಲ್ಲಿ ಯಾರೊಬ್ಬರನ್ನು ವಿಚಾರಣೆ ನಡೆಸದಂತೆ ರಾಜ್ಯ ಸರಕಾರವನ್ನು ನಿರ್ಬಂಧಿಸಿ ಮಧ್ಯಂತರ ಆದೇಶ ನೀಡುವಂತೆ ದೂರುದಾರರು ಕೋರಿದ್ದರು.

Similar News