2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರಕಾರ: ವಿವರ ಇಲ್ಲಿದೆ...

Update: 2022-11-22 16:00 GMT

ಬೆಂಗಳೂರು, ನ.22: ರಾಜ್ಯ ಸರಕಾರವು 2023ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ.

ಗಣರಾಜ್ಯೋತ್ಸವ (ಜ.26), ಮಹಾಶಿವರಾತ್ರಿ (ಫೆ.18), ಯುಗಾದಿ ಹಬ್ಬ (ಮಾ.22), ಮಹಾವೀರ ಜಯಂತಿ (ಎ.3), ಗುಡ್ ಫ್ರೈಡೆ (ಎ.7), ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (ಎ.14), ಕಾರ್ಮಿಕರ ದಿನಾಚರಣೆ (ಮೇ 1), ಬಕ್ರೀದ್ (ಜೂ.29), ಮೊಹರಂ ಕಡೇ ದಿನ (ಜು.29), ಸ್ವಾತಂತ್ರ್ಯ ದಿನಾಚರಣೆ (ಆ.15), ವರಸಿದ್ಧಿ ವಿನಾಯಕ ವ್ರತ (ಸೆ.18), ಈದ್-ಮಿಲಾದ್ (ಸೆ.28), ಗಾಂಧಿ ಜಯಂತಿ (ಅ.2), ಮಹಾನವಮಿ, ಆಯುಧಪೂಜೆ (ಅ.23), ವಿಜಯದಶಮಿ (ಅ.24), ಕನ್ನಡ ರಾಜ್ಯೋತ್ಸವ (ನ.1), ಬಲಿಪಾಡ್ಯಮಿ, ದೀಪಾವಳಿ (ನ.14), ಕನಕ ಜಯಂತಿ (ನ.30), ಕ್ರಿಸ್ ಮಸ್ (ಡಿ.25).

ಸೂಚನೆ: ಈ ರಜಾ ಪಟ್ಟಿಯಲ್ಲಿ ರವಿವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜ.15), ಬಸವ ಜಯಂತಿ/ಅಕ್ಷಯ ತೃತೀಯ (ಎ.23) ಮತ್ತು ನರಕ ಚತುರ್ದಶಿ (ನ.12) ಹಾಗೂ ಎರಡನೇ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ (ಅ.14) ಹಾಗೂ ನಾಲ್ಕನೇ ಶನಿವಾರದಂದು ಬರುವ ಈದುಲ್ ಫಿತ್ರ್(ರಮಝಾನ್) (ಎ.22) ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ (ಅ.28) ಈ ರಜೆ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ.

Similar News