ಬೇಲ್ ಮೇಲೆ ಹೊರಗಿರುವ ಬಿ.ಎಲ್. ಸಂತೋಷ್, ಅಪರೇಷನ್ ಕಮಲದ ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ ಏಕೆ?: ಕಾಂಗ್ರೆಸ್

Update: 2022-11-23 11:28 GMT

ಬೆಂಗಳೂರು:  'ಅಪರೇಷನ್ ಕಮಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರಗಿರುವ ಬಿ.ಎಲ್. ಸಂತೋಷ್  ತನಿಖೆಗೆ ಸಹಕರಿಸುತ್ತಿಲ್ಲ ಏಕೆ?' ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  ''ಕಾನೂನನ್ನು ಗೌರವಿಸುವುದು "ಶಾಸಕರ ಕಳ್ಳರಿಗೆ" ತಿಳಿದೇ ಇಲ್ಲವೇ? ತೆಲಂಗಾಣದಲ್ಲಿ ವಶಪಡಿಸಿಕೊಂಡ 150 ಕೋಟಿ ಹಣದ ಮೂಲ ಯಾವುದು? ಇಷ್ಟು ದೊಡ್ಡ ಮೊತ್ತ ಸಿಕ್ಕಿದರೂ ಐಟಿ, ಇಡಿಗಳು ಕಾರ್ಯೋನ್ಮುಖರಗದಿರುವುದೇಕೆ?'' ಎಂದು ಪ್ರಶ್ನೆ ಮಾಡಿದೆ. 

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಶಾಸಕರಿಗೆ ಆಮಿಷವೊಡ್ಡಿದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಏಳು ಸದಸ್ಯರ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾಗುವಂತೆ ತೆಲಂಗಾಣ ಹೈಕೋರ್ಟ್ ಶನಿವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೆ ಸೂಚಿಸಿತ್ತು. 

Similar News