ವಿಕಲಚೇತನ ವ್ಯಕ್ತಿಗಳ ಆಯುಕ್ತರ ಹುದ್ದೆಗೆ ಅರ್ಜಿ ಆಹ್ವಾನ

Update: 2022-11-23 15:57 GMT

ಬೆಂಗಳೂರು, ನ. 23: ರಾಜ್ಯ ವಿಕಲಚೇತನ ವ್ಯಕ್ತಿಗಳ ಆಯುಕ್ತರ ಹುದ್ದೆಯ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಶಾಸನಬದ್ಧವಾಗಿ ರಚಿಸಲಾದ ಯಾವುದೇ ವಿವಿಯಿಂದ ಪದವಿಯನ್ನು ಪಡೆದಿರತಕ್ಕದ್ದು, ಸಮಾಜ ಸೇವೆ/ಕಾನೂನು/ನಿರ್ವಹಣೆ/ಮಾನವ ಹಕ್ಕು/ಪುನರ್ವಸತಿ/ವಿಕಲಚೇತನರ ಶಿಕ್ಷಣ ವಿದ್ಯಾರ್ಹತೆಯಲ್ಲಿ ಪದವಿ ಅಥವಾ ಡಿಪ್ಲೊಮಾ ಪಡೆದಿರಬೇಕು. ಸರಕಾರದ ‘ಎ’ ವೃಂದದ ಅಧಿಕಾರಿಯಾಗಿ ಕನಿಷ್ಟ 2 ವರ್ಷದ ಅವಧಿಗೆ ವಿಕಲಚೇತನರ ಕಲ್ಯಾಣ ಹಾಗೂ ಪುನರ್ವಸತಿ ಯೋಜನೆಯಡಿ ಸೇವೆಯನ್ನು ಸಲ್ಲಿಸಿರಬೇಕು.

ವಿಕಲಚೇತನರ ಕ್ಷೇತ್ರದ ವಿಭಾಗವನ್ನು ನಿರ್ವಹಿಸುತ್ತಿರುವ ಕೇಂದ್ರ/ರಾಜ್ಯ ಸರಕಾರ/ಸರಕಾರಿ ಸಾರ್ವಜನಿಕ ವಲಯದ ಉದ್ದಿಮೆ/ಅರೆ ಸರಕಾರಿ/ ಸ್ವಾಯುತ್ತ ಸಂಸ್ಥೆಗಳಲ್ಲಿಯ ಉನ್ನತ ಮಟ್ಟದ ಸಂಪನ್ಮೂಲ ವ್ಯಕ್ತಿಯು ವಿಕಲಚೇತನರ ಪುನರ್ವಸತಿ ಕ್ಷೇತ್ರ್ರದಲ್ಲಿ ಕನಿಷ್ಟ 15 ವರ್ಷಗಳ ಸೇವಾ ಅನುಭವವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.

ನೋಂದಾಯಿತ ಅಂಚೆ ಸ್ವೀಕೃತಿ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 20 ಕೊನೆಯ ದಿನ. ಅರ್ಜಿಗಳನ್ನು ಸರಕಾರದ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, 1ನೆ ಮಹಡಿ, 3ನೆ ಗೇಟ್, ಬಹುಮಹಡಿ ಕಟ್ಟಡ, ಬೆಂಗಳೂರು-01 ಇಲ್ಲಿಗೆ ಕಳುಹಿಸಬೇಕು.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ https://dwdsc.karnataka.gov.in/ ನ್ನು ವೀಕ್ಷಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸರಕಾರದ ಉಪಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News