ಬೆಂಗಳೂರಿನ ಮೇಲ್ಸೇತುವೆಯಲ್ಲಿ ನಟ್ಟು, ಬೋಲ್ಟು ಸಡಿಲ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

Update: 2022-11-23 16:51 GMT

ಬೆಂಗಳೂರು: ನಗರದ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ (ಸಿರ್ಸಿ ಸರ್ಕಲ್‌)ಯಲ್ಲಿನ ವಿಸ್ತರಣಾ ಜಾಯಿಂಟ್‌ನ ಬೋಲ್ಟ್‌ನಲ್ಲಿ ಮಂಗಳವಾರ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದ್ದು, ಬಿಜೆಪಿ ಸರಕಾರಕ್ಕ ಅದನ್ನು ಸರಿಪಡಿಸಲಾಗದಷ್ಟು ಅಸಮರ್ಥವಾಗಿದೆ ಎಂದು ಕಾಂಗ್ರೆಸ್ (Karnataka Congress) ಕಿಡಿ ಕಾರಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ , ''ರಸ್ತೆಗಳಲ್ಲಿ ಗುಂಡಿಗಳ ಭಯ, ಮೇಲ್ಸೇತುವೆಗಳಲ್ಲಿ ನಟ್ ಬೋಲ್ಟ್ ಭಯ! ಮೇಲ್ಸೇತುವೆ ಸೇತುವೆ ನಿರ್ಮಾಣದ ನಂತರ ಉತ್ತಮ ನಿರ್ವಹಣೆಯಲ್ಲಿತ್ತು. ಬಿಜೆಪಿ ಅವಧಿಯಲ್ಲಿ ನಟ್, ಬೋಲ್ಟ್‌ಗಳನ್ನೂ ಸಹ ನಿರ್ವಹಿಸಲಾಗದಷ್ಟು ಕಮಿಷನ್ ಲೂಟಿಯಲ್ಲಿ ನಿರತರಾಗಿದ್ದಾರೆ. ಒಂದು ನಟ್, ಬೋಲ್ಟ್ ಸರಿಪಡಿಸಲಾಗದಷ್ಟು ಅಸಮರ್ಥವಾಗಿದೆಯೇ ನಿಮ್ಮ ಸರ್ಕಾರ? ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನೆ ಮಾಡಿದೆ. 

''ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದುರ್ಬಲ ಸಿಎಂ ಎಂದರೆ ಬಸವರಾಜ ಬೊಮ್ಮಾಯಿ ಅವರು ಮಾತ್ರ. ಕನ್ನಡಿಗರ ಮೇಲೆ ಗೋವಾ ಸವಾರಿ ಮಾಡಿದರೂ, ಮಹಾರಾಷ್ಟ್ರ ನಮ್ಮ ನೆಲಕ್ಕೆ ಕನ್ನ ಹಾಕಿದರೂ, ತೆಲಂಗಾಣ ರಾಯಚೂರಿಗೆ ಕೈ ಹಾಕಿದರೂ ಮೂಕ ಬಸವನಂತಿರುತ್ತಾರೆ ಸಿಎಂ. ಕೇಂದ್ರ, ಗೋವಾ, ಮಹಾರಾಷ್ಟ್ರ, ಮೂರು ಇಂಜಿನ್ ಸರ್ಕಾರಗಳು ಸವಾರಿ ಮಾಡುತ್ತಿದ್ದರೂ ಸುಮ್ಮನಿದ್ದಾರೆ'' ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ಟೀಕಿಸಿದೆ.  

Similar News