ಮಧ್ಯಪ್ರದೇಶದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಸಾಥ್

Update: 2022-11-24 04:46 GMT

ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ  ಭಾರತ್ ಜೋಡೋ ಯಾತ್ರೆ ಗುರುವಾರ ಬೆಳಗ್ಗೆ ಮಧ್ಯಪ್ರದೇಶದ ಮೂಲಕ ಸಾಗುತ್ತಿದ್ದಂತೆ ರಾಹುಲ್ ಅವರ ಸಹೋದರಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾತ್ರೆಗೆ ಸಾಥ್ ನೀಡಿದರು.

ಸೆ.7ರಂದು ಯಾತ್ರೆ  ಆರಂಭವಾದ ಬಳಿಕ ಇದೇ ಮೊದಲ ಬಾರಿ ಪ್ರಿಯಾಂಕಾ ಅವರು ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಮಹಾರಾಷ್ಟ್ರದ ಪಾದಯಾತ್ರೆ ಮುಗಿಸಿ ಬುಧವಾರ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಪ್ರವೇಶಿಸಿದೆ.

ಇಂದು ರಾಹುಲ್  ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿಗರು ಖಾಂಡ್ವಾದ ಬೋರಗಾಂವ್‌ನಿಂದ ಪಾದಯಾತ್ರೆ ಆರಂಭಿಸಿದರು. ಅವರು ಖಾರ್ಗೋನ್‌ಗೆ ತೆರಳುವ ಮೊದಲು ಸ್ವಾತಂತ್ರ್ಯ ಹೋರಾಟಗಾರ ಹಾಗೂ  ಬುಡಕಟ್ಟು ಜನಾಂಗದ ಐಕಾನ್ ತಾಂತ್ಯಾ ಭೀಲ್ ಅವರ ಜನ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಬುಡಕಟ್ಟು ಸಮುದಾಯವನ್ನು ತಲುಪಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದಂತೆ ಬಿಜೆಪಿಯು ಕೌಂಟರ್ ನೀಡಲು ಸಿದ್ಧವಾಗಿದೆ. ಆಡಳಿತ ಪಕ್ಷವು ನಿನ್ನೆ ತಾಂತ್ಯಾ ಭೀ ಅವರ ಜನ್ಮಸ್ಥಳದಿಂದ ಜಂಜಾಟಿಯ ಗೌರವ ಯಾತ್ರೆಯನ್ನು ಆರಂಭಿಸಿದೆ. ಮೆರವಣಿಗೆಯ ಆರಂಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ  ನಾಲ್ವರು ಸಚಿವರು ಭಾಗವಹಿಸಿದ್ದರು.

Similar News