ಪಕ್ಷದ ಟಿಕೆಟ್‌ ಆಕಾಂಕ್ಷಿಗಳಿಂದ ಪ್ರಮಾಣ ಮಾಡಿಸಿದ ಸಿಎಂ ಬೊಮ್ಮಾಯಿ

Update: 2022-11-24 05:35 GMT

ದಾವಣಗೆರೆ: ಇಲ್ಲಿನ ಗಾಂಧಿ ಮೈದಾನದಲ್ಲಿ ಬುಧವಾರ ನಡೆದ ಜನ ಸಂಕಲ್ಪ ಯಾತ್ರೆಯ ವೇದಿಕೆಗೆ ಗಣ್ಯರು ಆಗಮಿಸುತ್ತಿದ್ದಂತೆ ಪಕ್ಷದ ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರ ಫೋಟೊ ತೋರಿಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹರಿಹರ ಕ್ಷೇತ್ರದ ಮೂವರು ಆಕಾಂಕ್ಷಿಗಳಿಂದ ''ಒಗ್ಗಟ್ಟು ಪ್ರದರ್ಶಿಸುತ್ತೇವೆ'' ಎಂದು ಪ್ರಮಾಣ ಮಾಡಿಸಿದ್ದಾರೆ. 

ಬಿ.ಪಿ. ಹರೀಶ್‌ ಹಾಗೂ ಚಂದ್ರಶೇಖರ ಪೂಜಾರ್‌ ಜೊತೆಗೆ ಇನ್ನೊಬ್ಬ ಆಕಾಂಕ್ಷಿಯಾಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಅವರನ್ನೂ ತಮ್ಮ ಬಳಿ ಕರೆಸಿಕೊಂಡ ಸಿಎಂ, ‘ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ನೀಡಿದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಬಿಜೆಪಿ ಗೆಲ್ಲಿಸಬೇಕು' ಎಂದು ಇದೇ ವೇಳೆ ಮನವಿ ಮಾಡಿದರು. 

ಇದನ್ನೂ ಓದಿ: 500 ಕೆ.ಜಿ. ಗಾಂಜಾ ತಿಂದ ಇಲಿಗಳು: ಕೋರ್ಟ್‍ಗೆ ಉತ್ತರಪ್ರದೇಶ ಪೊಲೀಸರು ಮಾಹಿತಿ!

''ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ನಮ್ಮ ಡಬಲ್ ಎಂಜಿನ್ ಸರ್ಕಾರ ರಾಜ್ಯದಲ್ಲಿ ಅಭಿವದ್ಧಿಯ ಮಹಾ ಪರ್ವವನ್ನೆ ಹರಿಸಿದೆ. ಮುಂದಿನ 6 ತಿಂಗಳಲ್ಲಿ ನಿಮ್ಮ ಕ್ಷೇತ್ರದ ತಾಲೂಕಾ, ಬೂತ್ ಹಾಗೂ ಗ್ರಾಮ, ವಾರ್ಡ್ ಮಟ್ಟದಲ್ಲಿ ಪಕ್ಷ ಸಂಘಟಿಸಿ ಬಲಪಡಿಸಿಬೇಕು. ದೇಶದ ಹಾಗೂ ರಾಜ್ಯದ ಸಮಗ್ರ ಅಭಿವದ್ಧಿಗಾಗಿ ಭಾರತೀಯ ಜನತಾ ಪಕ್ಷ ಯಾವರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದರ ಕುರಿತು ಪ್ರತಿಯೋಬ್ಬ ಮತದಾರರ ಮನ ಮುಟ್ಟುವಂತೆ ತಿಳಿ ಹೇಳಿ ಬರಲಿರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಮತಹಾಕುವಂತೆ ಜಾಗತಿ ಮೂಡಿಸಬೇಕು'' ಎಂದು ನೆರೆದಿದ್ದ ಜನತೆಯ ಎದುರು ಸಿ.ಎಂ ಘೋಷಣೆ ಮಾಡಿದರು.

Similar News