100 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹ; ಶೃಂಗೇರಿ ಪಟ್ಟಣದಲ್ಲಿ ತಮಟೆ ಬಾರಿಸಿ ಹೋರಾಟಕ್ಕೆ ಕರೆ ನೀಡಿದ ಯುವಕರು

Update: 2022-11-24 10:47 GMT

ಚಿಕ್ಕಮಗಳೂರು: ಕಳೆದ ಒಂದು ವರ್ಷದ ಹಿಂದೆ  ಅಧಿಕಾರಿಗಳು ನೀಡಿದ್ದ 100 ಬೆಡ್ ಆಸ್ಪತ್ರೆ  ನಿರ್ಮಾಣದ ಕೆಲಸ ಇನ್ನೂ ಕಾರ್ಯರೂಪಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಹೋರಾಟಕ್ಕೆ ಮುಂದಾಗಿರುವ ಸಮಾನ ಮನಸ್ಕರ ಯುವಕರ ತಂಡ ಒಂದು ತಮಟೆ ಬಾರಿಸುತ್ತಾ ಧರಣಿ ಸತ್ಯಾಗ್ರಹದ ಬಗ್ಗೆ ಪಟ್ಟಣದಲ್ಲಿ ಪ್ರಚಾರ ನಡೆಸುತ್ತಿದೆ.  

ಶೃಂಗೇರಿ ಪಟ್ಟಣದ ಬೀದಿ ಬೀದಿಯಲ್ಲಿ ಸುತ್ತಿ ತಮಟೆ ಪ್ರಚಾರ ನಡೆಸುತ್ತಿರುವ ಯುವಕರು, ತಾಲೂಕಿನಾದ್ಯಂತ ಪ್ರಚಾರ ಮಾಡಲು ಮುಂದಾಗಿದ್ದಾರೆ. 

ಜನರು ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿಕೊಂಡು ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಕಳೆದ ವರ್ಷ ಶೃಂಗೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ಶೃಂಗೇರಿಗೆ ಭೇಟಿ ನೀಡಿದಾಗ ಸಿಎಂ ಬೊಮ್ಮಾಯಿ ಅವರು ಮಾತು ಕೊಟ್ಟಿದ್ದರೆನ್ನಲಾಗಿದ್ದು, ಈ ವೇಳೆ ಒಂದು ತಿಂಗಳೊಳಗೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಅಧಿಕಾರಿಗಳು ಹೇಳಿದ್ದರಾದೂ  ಒಂದು ವರ್ಷ ಸಂದರೂ ಯಾವುದೇ ಪ್ರಗತಿ ಕಾಣಲಿಲ್ಲ, ಈ ವಿಚಾರವಾಗಿ ಯುವಕರ ತಂಡ ರಾತ್ರೋ ರಾತ್ರಿ ತಮಟೆ ಶೃಂಗೇರಿ ಪಟ್ಟಣ ತುಂಬಾ ತಮಟೆ ಬಾರಿಸಿ ಧರಣಿ ಸತ್ಯಾಗ್ರಹದ ಬಗ್ಗೆ ಪ್ರಚಾರ ಮಾಡಲು ಮುಂದಾಗಿದ್ದು, ನಾಳೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ. 

Similar News