ಹುಬ್ಬಳ್ಳಿ: 23 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರನಿಗೆ 17,500 ರೂ. ದಂಡ!

Update: 2022-11-25 15:12 GMT

ಹುಬ್ಬಳ್ಳಿ, ನ.25 : 23 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ಓಡಾಡುತ್ತಿದ್ದ ಬೈಕ್‌ ಸವಾರರೊಬ್ಬರಿಗೆ ಇಂದು (ಶುಕ್ರವಾರ) ಇಲ್ಲಿನ ಟ್ರಾಫಿಕ್ ಎಎಸ್ ಐ ಮತ್ತು ಪೊಲೀಸ್ ಕಾನ್ಸ್ ಟೆಬಲ್ 17,500 ರೂ. ದಂಡವನ್ನು ಪಾವತಿಸುವಂತೆ ಸೂಚಿಸಿದ್ದಾರೆ. 

ನಗರದ ಶಿರೂರು ಪಾರ್ಕ್  ಬಳಿ ಉತ್ತರ ಟ್ರಾಫಿಕ್ ಎಎಸ್ ಐ ರಮಝಾನಬಿ ಅಳಗವಾಡಿ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಸಂತೋಷ್ ಚವ್ಹಾಣ್ ನಿತ್ಯ ಕರ್ತವ್ಯದಲ್ಲಿದ್ದಾಗ ಬೈಕ್ ಒಂದರಲ್ಲಿ ಹೆಲ್ಮೆಟ್ ಹಾಕದೇ ಬಂದ ವ್ಯಕ್ತಿಯನ್ನು ಗಮನಿಸಿದ್ದು, ಬೈಕ್ ಅನ್ನು ತಡೆದು  ಬಾಕಿ ಇರುವ ದಂಡವನ್ನು ಪರಿಶೀಲಿಸಲು ಸಿಬ್ಬಂದಿ ವಾಹನದ ಸಂಖ್ಯೆಯನ್ನು ನಮೂದಿಸಿದ್ದಾರೆ. ಈ ವೇಳೆ ಆ ವ್ಯಕ್ತಿ ಅನೇಕ ಸಂಚಾರ ಉಲ್ಲಂಘನೆಗಳನ್ನು ಮಾಡಿದ್ದಾರೆ ಮತ್ತು ದಂಡವನ್ನೇ ಪಾವತಿಸಲಿಲ್ಲ ಎಂಬ ವಿಚಾರ ಅವರ ಗಮನಕ್ಕೆ ಬಂದಿದೆ. ಬಳಿಕ ಬಾಕಿ ಉಳಿಸಿಕೊಂಡಿರುವ 17,500 ರೂ.  ದಂಡ ಪಾವತಿಸುವಂತೆ ಸೂಚಿಸಿದ್ದಾರೆ. 

ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಮೊಹಮ್ಮದ್ ರಫೀಕ್ ಗುಡಗೇರಿ ಎಂದು ಗುರುತಿಸಲಾಗಿದೆ. ಇವರು 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆನ್ನಲಾಗಿದ್ದು,  ಹೆಚ್ಚಿನ ಸಮಯ ಹೆಲ್ಮಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದರು. ಈತ 2017ರಿಂದ ಇಲ್ಲಿಯವರೆಗೆ 23 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News