ಮುಖ್ಯಮಂತ್ರಿ ಕಚೇರಿಯಲ್ಲಿ ಕಡತ ಕಳವು?

Update: 2022-11-25 17:17 GMT

ಬೆಂಗಳೂರು, ನ.25: ಜಾಹೀರಾತು ಯೋಜನೆ ಸಂಬಂಧ ಹಿರಿಯ ಅಧಿಕಾರಿಯೊಬ್ಬರು ಮುಖ್ಯಮಂತ್ರಿ  ಅವರ ಕಚೇರಿಗೆ ಕಳುಹಿಸಿದ್ದ ಕಡತವೇ ಕಳವು ಆಗಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿ ಕಚೇರಿಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, 'ಒಂದು ವರ್ಷದಿಂದ ಕಡತ ಕೈ ಸೇರಿಲ್ಲ' ಎಂದು ಅವರು ಉಲ್ಲೇಖ ಮಾಡಿದ್ದಾರೆ.

2021ನೆ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಕಚೇರಿಗೆ ಕಡತ ಸಲ್ಲಿಕೆ ಮಾಡಲಾಗಿತ್ತು. ಆದರೆ, ಇದುವರೆಗೂ ಈ ಕಡತ ಇಲಾಖೆಗೆ ಹಿಂದಿರುಗಿಲ್ಲ. ಜತೆಗೆ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮಾಹಿತಿ ಸಲ್ಲಿಸಬೇಕಾಗಿರುವ ಕಾರಣ, ಯಥಾ ಹಿಂದಿರುಗಿಸುವಂತೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದೀಗ ಒಂದು ವರ್ಷವಾದರೂ ಕಡತ ವಾಪಸ್ಸು ಆಗದ ಕಾರಣ, ಇದು ಕಳವು ಆಗಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Similar News