ಖಾಸಗಿ ವಾಣಿಜ್ಯ ವಾಹನ ಚಾಲಕರ ಬೇಡಿಕೆ ಈಡೇರಿಸಲು ಒತ್ತಾಯಸಿ ರಾಜ್ಯಮಟ್ಟದ ಜಾಥಾ

Update: 2022-11-27 18:21 GMT

ಬೆಂಗಳೂರು, ನ.27: ಆಟೋ, ಟ್ಯಾಕ್ಸಿ, ಲಾರಿ, ಖಾಸಗಿ ವಾಣಿಜ್ಯ ವಾಹನಗಳ ಚಾಲಕ ಹಾಗೂ ನಿರ್ವಾಹಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬರುವ ಮಾರ್ಚ್ ತಿಂಗಳಿನಲ್ಲಿ ರಾಜ್ಯಮಟ್ಟದ ಜಾಥಾವನ್ನು ಆಯೋಜಿಸಲಾಗುವುದು ಎಂದು ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟವು ತಿಳಿಸಿದೆ.

ರವಿವಾರ ಇಲ್ಲಿನ ಗುಂಡುರಾವ್ ಕ್ರೀಡಾಂಗಣದಲ್ಲಿ ಒಕ್ಕೂಟವು ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಿತ್ತು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖಂಡರು ಖಾಸಗಿ ವಾಣಿಜ್ಯ ವಾಹನಗಳ ಟಿಕರಿಂಗ್ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಸರಕಾರವು 500 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಬೇಕು. ಓಲಾ, ಉಬರ್, ರ್ಯಾಪಿಡೋ, ರೂಕ್ ಮತ್ತು ನಮ್ಮ ಯಾತ್ರಿ ಪಾರ್ಟನರ್‍ನಂತಹ ಆಪ್ ಆಧಾರಿತ ಬೃಹತ್ ಕಂಪನಿಗಳ ಪೈಪೋಟಿಯನ್ನು ತಡೆಗಟ್ಟಬೇಕು. ಈ ನಿಟ್ಟಿನಲ್ಲಿ ಸರಕಾರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇಂಡಿಯನ್ ಮೋಟಾರು ಕಾಯ್ದೆ ತಿದ್ದುಪಡಿ ವಾಪಾಸ್ಸು ಪಡೆಯಬೇಕು. ಸಾರಿಗೆ ವಾಹನಗಳ ಇನ್ಸೂರೆನ್ಸ್ ಪಾಲಿಸಿಗಳ ಮೇಲೆ ಜಿಎಸ್‍ಟಿಯನ್ನು ತೆಗೆಯಬೇಕು. ಪೆಟ್ರೋಲ್, ಡಿಸೆಲ್, ಆಟೋ ಎಲ್‍ಪಿಜಿ ಗ್ಯಾಸ್‍ಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳು ಒಟ್ಟಾಗಿ ಹೋರಾಟಗಳನ್ನು ಮಾಡಬೇಕು ಎಂದು  ಕರೆ ನೀಡಲಾಯಿತು.

Similar News