ಮೂಡಿಗೆರೆ: ಒಂದು ಕಾಡಾನೆ ಸೆರೆ

Update: 2022-11-28 10:20 GMT

ಚಿಕ್ಕಮಗಳೂರು, ನ.28: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಕೆಂಜಿಗೆ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಸೋಮವಾರ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಬೆಳಗೋಡು ಸಮೀಪದ ಕುಂಡ್ರ ಎಂಬಲ್ಲಿ ಅರಣ್ಯ ಪ್ರದೇಶದಲ್ಲಿ ಒಂದು ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಗಿದೆ.

ಸೆರೆಯಾಗಿರುವ ಕಾಡಾನೆ ಸಣ್ಣ ಗಾತ್ರದಲ್ಲಿದ್ದು, ಎರಡು ಸಾಕಾನೆಗಳ ಸುಪರ್ದಿಯಲ್ಲಿ ಸಕ್ರೆಬೈಲ್ ಆನೆ ಬಿಡಾರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.

ಕಾರ್ಯಾಚರಣೆಗೆ ಮತ್ತಿಗೂಡು ಮತ್ತು ದುಬಾರೆಯಿಂದ ಕೃಷ್ಣಾ, ಅಭಿಮನ್ಯು, ಮಹೇಂದ್ರ, ಪ್ರಶಾಂತ್, ಭೀಮ ಮತ್ತು ಹರ್ಷ ಒಟ್ಟು 6 ಸಾಕು ಆನೆಗಳು ಹಾಗೂ ಸುಮಾರು 100 ಮಂದಿ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

ಇನ್ನು ಎರಡು ಕಾಡಾನೆ ಹಿಡಿಯಲು ಎರಡು ದಿನಗಳ ಬಿಡುವಿನ ಬಳಿಕ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

Similar News