ಸುಂಟಿಕೊಪ್ಪ | ಹಸುವಿನ ಮೇಲೆ ಅನೈಸರ್ಗಿಕ ಕೃತ್ಯ ಆರೋಪ: ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

Update: 2022-11-28 11:26 GMT

ಸುಂಟಿಕೊಪ್ಪ, ನ.28: ಮೇಯಲು ಕಟ್ಟಿಹಾಕಿದ್ದ ಹಸುವಿನ ಮೇಲೆ ಅನೈಸರ್ಗಿಕ ಕೃತ್ಯ ಎಸಗುತ್ತಿದ್ದ ಎಂದು ಆರೋಪಿಸಿ, ವ್ಯಕ್ತಿಯೊಬ್ಬನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. 

ನವೆಂಬರ್ 27ರ ರವಿವಾರದಂದು ಈ ಕೃತ್ಯ ಬೆಳಕಿಗೆಗೆ ಬಂದಿದ್ದು, ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. 

ಪೊಲೀಸ್ ಮಾಹಿತಿಯ ಪ್ರಕಾರ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಸಿ.ಎ.ದೇವಯ್ಯ ಅವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದು,  ಮನೆಗೆ ಹೋಗಿ ತಮ್ಮ ಬಟ್ಟೆ ಬದಲಾಯಿಸಿ ಪವನ್ಎಂ ಬುವವರೊಂದಿಗೆ ಮೇಯಲು ಬಿಟ್ಟಿದ್ದ ಹಸುವನ್ನು ವಾಪಾಸ್ಸು ಕೊಟ್ಟಿಗೆಗೆ ತರಲು ಹೋದ ಸಂದರ್ಭ ಅಪರಿಚಿತ ವ್ಯಕ್ತಿಯೊಬ್ಬ ಹಸುವಿನ ಮೇಲೆ ಪೈಶಾಚಿಕ ಕೃತ್ಯ ಎಸುಗುತ್ತಿರುವುದನ್ನು ನೋಡಿ ಆತನನ್ನು ಹಿಡಿದು ವಿಚಾರಿಸಿದಾಗ ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಅಬ್ಬೂಬಕ್ಕರ್ ಸಿದ್ದೀಕ್ ಎಂದು ತಿಳಿದು ಬಂದಿದೆ. 

ಪೊಲೀಸರಿಗೆ ದೂರು ನೀಡಿ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಭಾರತೀಯ ದಂಡ ಸಂಹಿತೆ  ಕಲಂ 377 ಪ್ರಕಾರ ಮೊಕದ್ದಮೆ ದಾಖಲಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಸಂದರ್ಭ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. 

ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯಾಗುವ ಮೂಲಕ ಮುಂದೆಂದೂ ಈ ರೀತಿಯ ಅನಾಗರೀಕ ಮತ್ತು ಅನೈತಿಕ ಪ್ರಕರಣಗಳು ನಡೆಯದಂತಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Similar News