ಅದೊಂದು ಗಂಭೀರವಾದ ವಿಷಯವೇನಲ್ಲ: ವಿದ್ಯಾರ್ಥಿಯನ್ನು ಕಸಬ್ ಎಂದು ಕರೆದ ಘಟನೆಗೆ ಸಚಿವ ಬಿ.ಸಿ ನಾಗೇಶ್ ಪ್ರತಿಕ್ರಿಯೆ

Update: 2022-11-29 15:32 GMT

ಬೆಂಗಳೂರು, ನ.29: ತಗರತಿಯಲ್ಲಿ ವಿಧ್ಯಾರ್ಥಿಯೋರ್ವನನ್ನು ಪ್ರಾಧ್ಯಾಪಕರೊಬ್ಬರು  'ಕಸಬ್' ಎಂದು ಕರೆದಿರುವ  ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. 

ಈ ಘಟನೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ , 'ಇದೊಂದು ಅಷ್ಟು ಗಂಭೀರವಾದ ವಿಷಯ ಎಂದು ನನಗನಿಸುವುದಿಲ್ಲ' ಎಂದು ಹೇಳಿದ್ದಾರೆ.

''ಸಾಮಾನ್ಯವಾಗಿ ಬಹುತೇಕ ಎಲ್ಲರೂ ‘ರಾವಣ’ ಅಥವಾ ‘ಶಕುನಿ’ ಎಂಬ ಪದಗಳನ್ನು ನಿತ್ಯ ಬಳಸುತ್ತಾರೆ. 'ನೀನೇಕೆ ರಾವಣನಂತೆ ಅಥವಾ ಶಕುನಿಯಂತೆ ವರ್ತಿಸುತ್ತೀಯಾ?'  ಎಂದು ಪ್ರಶ್ನೆ ಮಾಡುತ್ತೇವೆ, ಆದರೆ ಅದು ಸಮಸ್ಯೆಯಾಗುವುದಿಲ್ಲ. ಆದರೆ ಕಸಬ್ ಎಂದು ಕರೆದರೆ ಮಾತ್ರ ಏಕೆ ದೊಡ್ಡ ಸಮಸ್ಯೆಯಾಗುತ್ತದೆಂದು ನನಗೆ ಗೊತ್ತಿಲ್ಲ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಆ ಪ್ರಾಧ್ಯಾಪಕನ ಮೇಲೆ ಕ್ರಮ ಕೈಗೊಂಡಿದ್ದು, ಅಮಾನತು ಮಾಡಲಾಗಿದೆ. ಅದರೆ ಕೆಲ ಹೆಸರುಗಳು ಏಕೆ ರಾಷ್ಟ್ರ ಮಟ್ಟದ ಸುದ್ದಿಗಳಾಗುತ್ತವೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ'' ಎಂದು ಸಚಿವರು ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಹಂಝಾ ತನ್ನನ್ನು ಕಸಬ್ ಎಂದು ಕರೆದ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ರವೀಂದ್ರನಾಥ್ ಅವರನ್ನು ಪ್ರಶ್ನಿಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. 

ಎಂಐಟಿ ಸ್ಪಷ್ಟನೆ:  ಈ ಘಟನೆ ಗುರುವಾರ ಅಥವಾ ಶುಕ್ರವಾರ ನಮ್ಮ ಸಂಸ್ಥೆಯಲ್ಲಿ ನಡೆದಿದೆ. ಈ ಬಗ್ಗೆ ಆಂತರಿಕ ವಿಚಾರಣೆ ನಡೆಯುವವರೆಗೆ ತರಗತಿ ತೆಗೆದುಕೊಳ್ಳದಂತೆ ಸಂಬಂಧಪಟ್ಟ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರಿಗೆ ಸೂಚನೆ ನೀಡಿದ್ದೇವೆ. ನಮ್ಮ ಕ್ಯಾಂಪಸ್ ನಲ್ಲಿರುವ  ವೈವಿಧ್ಯತೆ ಬಗ್ಗೆ  ನಮಗೆ  ಹೆಮ್ಮೆಯಿದೆ ಹಾಗು ಇಂತಹ ಯಾವುದೇ ನಿಂದನೆಯ ವರ್ತನೆಯನ್ನು ನಾವು ಸಹಿಸುವುದಿಲ್ಲ. ಇದು ಇಂತಹ ಒಂದೇ ಘಟನೆ. ನಾವು ಧರ್ಮ, ಜಾತಿ, ಲಿಂಗ ಹಾಗು ಪ್ರಾದೇಶಿಕ ಬೇಧ ಮಾಡದೆ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕ್ಯಾಂಪಸ್ ಎಂದು ಎಂದು ಹೇಳಿದೆ.

| Full View

Similar News