ಕ್ಷೀರಭಾಗ್ಯ ಯೋಜನೆ | ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್‍ನಲ್ಲಿ ಹಾಲು ವಿತರಣೆಗೆ ಪ್ರಸ್ತಾವ: ಬಾಲಚಂದ್ರ ಜಾರಕಿಹೊಳಿ

Update: 2022-11-29 14:38 GMT

ಬೆಂಗಳೂರು, ನ. 29: ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲನ್ನು ‘ಟೆಟ್ರಾ ಪ್ಯಾಕ್’ನಲ್ಲಿ ವಿತರಿಸಬೇಕೆಂದು ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. 

ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್‍ನಲ್ಲಿ ಹಾಲು ವಿತರಣೆ ಮಾಡಿದರೆ ಆರು ತಿಂಗಳ ವರೆಗೆ ಸುರಕ್ಷಿತವಾಗಿರಲಿದೆ. ಪ್ರಾಯೋಗಿಕವಾಗಿ ನಾಲ್ಕೈದು ಜಿಲ್ಲೆಗಳಲ್ಲಿ ಆರಂಭಿಸಬೇಕು. ಈ ಜಿಲ್ಲೆಗಳಲ್ಲಿ ದೊರೆಯುವ ಪ್ರತಿಕ್ರಿಯೆ ಆಧರಿಸಿ ರಾಜ್ಯಾದ್ಯಂತ ವಿಸ್ತರಿಸಬಹುದು. ಅಲ್ಲದೇ ಮಕ್ಕಳು ಇಚ್ಛಿಸಿದರೆ ಹಾಲನ್ನು ಮನೆಗೆ ಕೊಂಡೊಯ್ದು ಕುಡಿಯಲು ಅನುಕೂಲ ಎಂದು ಅವರು ತಿಳಿಸಿದ್ದಾರೆ.

Full View

Similar News