×
Ad

ಹುಬ್ಬಳ್ಳಿ | ಖಾಸಗಿ ಬಸ್ ಪಲ್ಟಿ: ಚಾಲಕ ಸೇರಿ ಹಲವರಿಗೆ ಗಾಯ

Update: 2022-12-01 12:22 IST

ಹುಬ್ಬಳ್ಳಿ: ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸಹಿತ ಹಲವರಿಗೆ ಗಾಯವಾದ ಘಟನೆ ಗುರುವಾರ ಮುಂಜಾನೆ ಬೈಪಾಸ್ ನ ನೇಕಾರ ನಗರ ಬಳಿ ನಡೆದಿದೆ.

ಬೆಂಗಳೂರಿನಿಂದ ಗುಜರಾತ್ ಕಡೆ ಹೊರಟಿದ್ದ ಖಾಸಗಿ ಬಸ್ ಅವಳಿನಗರ ಬೈಪಾಸ್‌ನ ನೇಕಾರ ನಗರದ ಬ್ರಿಡ್ಜ್ ಮೇಲಿಂದ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ಚಾಲಕ ಸೇರಿ ಹಲವರಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಸ್ಥಳೀಯರ ಸಹಾಯದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

Similar News