ವೋಟರ್ ಐಡಿ ಹಗರಣ | ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂದು ಅರ್ಥ ಆಗುತ್ತಿಲ್ಲ: ನ್ಯಾ.ಸಂತೋಷ್ ಹೆಗ್ಡೆ ಬೇಸರ

Update: 2022-12-01 13:25 GMT

ದಾವಣಗೆರೆ :  'ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳು ಸಂವಿಧಾನ ಮತ್ತು ರಾಷ್ಟ್ರದ ಕಾನೂನುನಿಗೆ ವಿರುದ್ಧವಾಗಿದ್ದು, ಇದನ್ನು ಯಾರು ಸಹ ಸರಿಯೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ನ್ಯಾ.ಸಂತೋಷ್ ಹೆಗ್ಡೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ ಸ್ವಾತಂತ್ರ್ಯ ಸಂಸ್ಥೆಯಾಗಿದೆ.  ಇಂತಹ ಸಂಸ್ಥೆಯಲ್ಲಿ ಅವ್ಯವಹಾರ ಆಗುತ್ತಿದೆ ಎಂದರೆ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂದು ಅರ್ಥ ಆಗುತ್ತಿಲ್ಲ. ರಾಜಕೀಯಕ್ಕೆ  ಐಎಎಸ್ ಅಧಿಕಾರಿಗಳು, ಗೂಂಡಾಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಅವರೆಲ್ಲ ರಾಜಕಾರದಲ್ಲಿರುವಷ್ಟು ಸಂಪಾದನೆ ಎಲ್ಲಿಯೂ ಬರುವುದಿಲ್ಲ ಅಂದುಕೊಂಡಿದ್ದಾರೆ. ಇದಕ್ಕೆಲ್ಲಾ  ಕಡಿವಾಣ ಬೀಳಬೇಕಿದೆ'' ಎಂದು ಹೇಳಿದರು. 

''ಈ ವ್ಯವಸ್ಥೆ ಬಹಳಷ್ಡು ಸುಧಾರಣೆ ಆಗಬೇಕು ಎಂದ ಅವರು, ಲೋಕಾಯುಕ್ತಕ್ಕೆ ಈಗ ಅಧಿಕಾರ ಕೊಟ್ಟಿದ್ದಾರೆ ಅದು ಹೇಗೆ ಅಡಳಿತ ನಡೆಸುತ್ತದೆ ಎನ್ನುವುದು ಕಾದು ನೋಡೋಣ'' ಎಂದು ಹೇಳಿದರು.

Similar News