ನೀಲಿ ಬಾವುಟಗಳನ್ನು ಕಿತ್ತು ಚರಂಡಿಗೆಸೆದ ಪ್ರಕರಣ| ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇಸ್ ಮುಚ್ಚಿ ಹಾಕಲು ಹುನ್ನಾರ: ಆರೋಪ

ಶೃಂಗೇರಿ; ಪೊಲೀಸರ ವಿರುದ್ಧ BSP ಆಕ್ರೋಶ

Update: 2022-12-01 18:37 GMT

ಶೃಂಗೇರಿ, ಡಿ.1: ಪಟ್ಟಣದಲ್ಲಿ ಬಿಎಸ್ಪಿ ವತಿಯಿಂದ ನ.1ರಂದು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ನೀಲಿ ಬಾವುಟ, ಬಂಟಿಂಗ್ಸ್ ಗಳನ್ನು ಕಟ್ಟಲಾಗಿತ್ತು. ಆದರೆ, ಕಾರ್ಯಕ್ರಮದ ಮುಗಿದ ದಿನದಂದು ರಾತ್ರಿ ಕಿಡಿಗೇಡಿಗಳು ನೀಲಿ ಬಾವುಟ, ಬಂಟಿಂಗ್ಸ್ ಗಳನ್ನು ಕಿತ್ತು ಚರಂಡಿಗೆ ಎಸೆದಿದ್ದರು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಆರೋಪಿಗಳು ಬಿಜೆಪಿ ಕಾರ್ಯಕರ್ತರೆಂಬ ಕಾರಣಕ್ಕೆ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಬಿಎಸ್ಪಿ ತಾಲೂಕು ಅಧ್ಯಕ್ಷೆ ಶೀಲಾ ಆರೋಪಿಸಿದ್ದಾರೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ಶಂಕರಾಚಾರ್ಯ ವೃತ್ತದಲ್ಲಿ ಕಟ್ಟಲಾಗಿದ್ದ ನೀಲಿ ಬಾವುಟಗಳನ್ನು ನ.1ರಂದು ರಾತ್ರಿ ಕಿಡಿಗೇಡಿಗಳು ಕಿತ್ತು ಚರಂಡಿ ಎಸೆದಿದ್ದರು. ಈ ಕೃತ್ಯದಿಂದಾಗಿ ಸಂವಿಧಾನ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ. ಈ ಸಂಬಂಧ ನಾನು ನ.3ರಂದು ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಪತ್ತೆ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಮೂವರು ಆರೋಪಿಗಳ ಸುಳಿವು ಸಿಕ್ಕಿದ್ದು, ಆರೋಪಿಗಳು ಶೃಂಗೇರಿ ತಾಲೂಕಿನ ಬಿಜೆಪಿ ಯುವಮೋಚಾದ ಮುಖಂಡರು ಎಂದು ತಿಳಿದು ಬಂದಿದೆ. ಆದರೆ, ಆರೋಪಿಗಳ ಸುಳಿವು ಸಿಕ್ಕಿದ್ದರೂ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರನ್ನು ಬಂಧಿಸಿದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ಒಮ್ಮೆ ತಿಳಿಸಿದ್ದು, ಕೂಡಲೇ ತಾನು ಠಾಣೆಗೆ ಹೋಗಿ ದ್ದೆ. ಈ ವೇಳೆ ಠಾಣೆಯಲ್ಲಿ ಆರೋಪಿಗಳು ಇರಲಿಲ್ಲ. ಪೊಲೀಸರು ಆರೋಪಿಗಳನ್ನು ನೆಪ ಮಾತ್ರಕ್ಕೆ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದು, ಆರೋಪಿಗಳು ಆಡಳಿತ ಪಕ್ಷದ ಮುಖಂಡರಾಗಿರುವ ಕಾರಣಕ್ಕೆ ಪೊಲೀಸರು ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸುವ ಗೋಜಿಗೆ ಹೋಗಿಲ್ಲ. ಈ ಸಂಬಂಧ ಠಾಣಾಧಿಕಾರಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು ತಮಗೆ ಸುಳ್ಳು ಮಾಹಿತಿ ನೀಡಿದ್ದು, ವಿನಾಕಾರಣ ಠಾಣೆಗೆ ಅಲೆದಾಡಿಸಿದ್ದಾರೆ. ಪೊಲೀಸರ ಈ ನಡವಳಿಕೆಯಿಂದ ಅವರ ಕಾರ್ಯವೈಖರಿ ಬಗ್ಗೆ ಶಂಕೆ ಮೂಡುತ್ತಿದ್ದು, ಕಿಡಿಗೇಡಿಗಳು ಆಡಳಿತ ಪಕ್ಷದ ಮುಖಂಡರೆಂಬ ಕಾರಣಕ್ಕೆ ಅವರನ್ನು ಬಂಧಿಸದೆ ಕರ್ತವ್ಯ ಲೋಪ ಎಸಗಿರುವುದು ನಾಚಿ ಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡಿದ್ದು, ಪ್ರಕರಣ ಮುಚ್ಚಿ ಹಾಕುವ ಹುನ್ನಾರ ಮಾಡಿದ್ದಾರೆ. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಈ ಕೂಡಲೇ ಅವರನ್ನು ಬಂಧಿಸಬೇಕು. ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವು

Similar News