ಮುಸ್ಲಿಮ್ ರಾಜರು ಹಿಂದೂ ವಿರೋಧಿಗಳಾಗಿದ್ದರೆ, ಹಿಂದೂಗಳೇ ಉಳಿಯುತ್ತಿರಲಿಲ್ಲ: ನಿವೃತ್ತ ನ್ಯಾ. ವಸಂತ ಮುಳಸಾವಳಗಿ

''ಅಕ್ಬರ್ ಕೃಷ್ಣನ ಮಂದಿರ ಕಟ್ಟಿಸಿದ್ದ, ಅವನ ಪತ್ನಿ ಮತಾಂತರ ಆಗಿರಲಿಲ್ಲ...''

Update: 2022-12-02 07:26 GMT

ವಿಜಯಪುರ: 'ಮುಸ್ಲಿಮ್ ರಾಜರು ಹಿಂದೂ ವಿರೋಧಿಗಳಾಗಿದ್ದರೆ, ಭಾರತದಲ್ಲಿ ಹಿಂದೂಗಳೇ ಉಳಿಯುತ್ತಿರಲಿಲ್ಲ' ಎಂದು ಜಿಲ್ಲಾ ನಿವೃತ್ತ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇದ್ದಾರೆ. 

ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ‘ಸಂವಿಧಾನ ಆಶಯ ಈಡೇರಿದೆಯೇ?’ ಎಂಬ ವಿಚಾರಗೋಷ್ಠಿಯಲ್ಲಿ ಮಾತನಾಡಿದ ವಸಂತ ಮುಳಸಾವಳಗಿ ಅವರು, 'ಅಕ್ಬರ್ ಪತ್ನಿ ಹಿಂದೂ, ಆಕೆ ಧರ್ಮಾಂತರ ಆಗಿರಲಿಲ್ಲ. ಆಕೆ ಹಿಂದೂ, ಆತ ಮುಸ್ಲಿಮ್. ಅಕ್ಬರ್​ ಅವನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿಸಿದ್ದಾನೆ, ಹೋಗಿ ನೋಡಬಹುದು'  ಎಂದು ಹೇಳಿದ್ದಾರೆ.

''ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಅಂತಿದ್ದಾರಲ್ಲ, ಮುಸ್ಲಿಮರು ಏಳುನೂರು ವರ್ಷ ಆಳ್ವಿಕೆ ಮಾಡಿರೋದು ಇತಿಹಾಸ ಹೇಳುತ್ತೆ. ಅವರೆಲ್ಲ ಹಿಂದೂ ವಿರೋಧಿಗಳಾಗಿದ್ದರೆ, ಭಾರತದಲ್ಲಿ ಹಿಂದೂಗಳೇ ಉಳಿಯುತ್ತಿರಲಿಲ್ಲ. ಅವರಿಗೆ ಎಲ್ಲರನ್ನೂ ಕೊಲ್ಲಬಹುದಿತ್ತು. ಅಷ್ಟಾದರೂ ಮುಸ್ಲಿಮರು ಅಲ್ಪಸಂಖ್ಯಾತರು ಯಾಕಾದ್ರು?'' ಎಂದು ಪ್ರಶ್ನಿಸಿದ್ದಾರೆ. 

'ರಾಮ ಮತ್ತು ಕೃಷ್ಣ ಇತಿಹಾಸ ಪುರುಷರಲ್ಲ, ಅವರು ಕೇವಲ ಕಾದಂಬರಿ ಪಾತ್ರಧಾರಿಗಳು. ಅಶೋಕ ಚಕ್ರವರ್ತಿ ನಿಜವಾದ ಇತಿಹಾಸ ಪುರುಷ' ಎಂದು ವಸಂತ ಮುಳಸಾವಳಗಿ ಪ್ರತಿಪಾದಿಸಿದ್ದಾರೆ. 

Full View

Similar News