ಚಿರತೆ ದಾಳಿಗೆ ಬಲಿಯಾದ ಯುವತಿ ಕುಟುಂಬಕ್ಕೆ 7 ಲಕ್ಷ ರೂ. ಪರಿಹಾರ, ಚಿರತೆ ಸಿಕ್ಕಿದ್ದಲ್ಲಿ ಶೂಟೌಟ್‌ಗೆ ಆದೇಶ

'' ತಿ.ನರಸೀಪುರ ತಾಲೂಕಿನಲ್ಲಿ 15 ತಜ್ಞರ ತಂಡ ನೇಮಕ''

Update: 2022-12-02 11:22 GMT

ಮೈಸೂರು,ಡಿ.2: ಚಿರತೆ ದಾಳಿಯಿಂದ ಮೃತಪಟ್ಟ ಯುವತಿ ಕುಟುಂಬಕ್ಕೆ ಸರ್ಕಾರದ ವತಿಯಿಂದ 7ಲಕ್ಷ ರೂ. ಪರಿಹಾರ ನೀಡಲಾಗುವುದು. ಚಿರತೆ ಶೂಟ್ ಔಟ್ ಮಾಡುವಂತೆ ಸರ್ಕಾರದಿಂದ ಆದೇಶವೂ ಸಿಕ್ಕಿದೆ ಎಂದು ಮೈಸೂರು  ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ ತಿಳಿಸಿದರು.

ಚಿರತೆ ದಾಳಿಯಿಂದ ಎಸ್.ಕೆಬ್ಬೇಹುಂಡಿ ಗ್ರಾಮದ ಯುವತಿ ಮೇಘನಾ (22)  ಸಾವನ್ನಪ್ಪಿದ್ದು, ಯುವತಿಯ  ಶವ ಇಟ್ಟುಕೊಂಡು ತಿ.ನರಸೀಪುರ ಸರ್ಕಾರಿ ಆಸ್ಪತ್ರೆ ಬಳಿ ಗುರುವಾರ ಮಧ್ಯರಾತ್ರಿವರೆಗೂ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಬಳಿಗೆ ಆಗಮಿಸಿದ ಮೈಸೂರು ವೃತ್ತ ಅರಣ್ಯಾಧಿಕಾರಿ ಮಾಲತಿ ಪ್ರಿಯಾ ಮಾತನಾಡಿ, ಮೃತ ಯುವತಿ ಕುಟುಂಬಕ್ಕೆ ಏಳುವರೆ ಲಕ್ಷ ರೂ. ಪರಿಹಾರ ನೀಡಲಾಗುವುದು. ಕುಟುಂಬದ ಓರ್ವರಿಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಚಿರತೆ ಹಾವಳಿ ನಿಯಂತ್ರಿಸಲು ತಿ.ನರಸೀಪುರ ತಾಲೂಕಿನಲ್ಲಿ 15 ತಜ್ಞರ ತಂಡ ನೇಮಕ ಮಾಡುತ್ತೇವೆ. ಚಿರತೆ ಕಂಡ ಕೂಡಲೇ ಗುಂಡು ಹಾರಿಸಲು ಅನುಮತಿ ಸಿಕ್ಕಿದ್ದು, ಚಿರತೆ ಹಾವಳಿ ತಪ್ಪಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.

Similar News