'ದಿ ಕಾಶ್ಮೀರ್ ಫೈಲ್ಸ್' ವಿವಾದ : ನಡಾವ್ ಲಪಿಡ್ ಹೇಳಿಕೆ ಬೆಂಬಲಿಸುತ್ತೇವೆ ಎಂದ ಐಐಎಫ್‍ಐನ ಇತರ ಮೂವರು ತೀರ್ಪುಗಾರರು

Update: 2022-12-03 12:48 GMT

ಹೊಸದಿಲ್ಲಿ: 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಲನಚಿತ್ರ 'ಪ್ರಚಾರಕ್ಕಾಗಿ ಮಾಡಲಾಗಿದೆ' ಮತ್ತು ಅಶ್ಲೀಲವಾಗಿದೆ ಎಂದು ಹೇಳಿ ಇಸ್ರೇಲಿ ಚಿತ್ರ ನಿರ್ದೇಶಕ ಹಾಗೂ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IIFI) ತೀರ್ಪುಗಾರರ ಮಂಡಳಿ ಮುಖ್ಯಸ್ಥ ನಡಾವ್ ಲಪಿಡ್ (Nadav Lapid) ಇತ್ತೀಚೆಗೆ ಹೇಳಿ ವಿವಾದಕ್ಕೀಡಾಗಿದ್ದರೆ ಈಗ ಈ ಚಲನಚಿತ್ರೋತ್ಸವದ ಮೂವರು ತೀರ್ಪುಗಾರು ( IFFI jury) ನಡಾವ್ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು scroll.in ವರದಿ ಮಾಡಿದೆ.

ನಡಾವ್ ಅವರ ಹೇಳಿಕೆಯ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಭಾರತೀಯ ಚಿತ್ರ ನಿರ್ದೇಶಕ ಹಾಗೂ ತೀರ್ಪುಗಾರರ ಮಂಡಳಿಯ ಏಕೈಕ ಭಾರತೀಯ ಸದಸ್ಯರಾಗಿರುವ ಸುದೀಪ್ತೊ ಸೋನ್, ಲಪಿಡ್ ಅವರು ವೈಯಕ್ತಿಕ ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ ಹಾಗೂ ಅವರ ಟೀಕೆಯು ತೀರ್ಪುಗಾರರ ಮಂಡಳಿಯ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದಿದ್ದರು.

ಆದರೆ ಈಗ ತೀರ್ಪುಗಾರರ ಮಂಡಳಿಯ ಇತರ ಸದಸ್ಯರಾದ ಅಮೆರಿಕಾದ ಚಿತ್ರ ನಿರ್ಮಾಪಕ ಜಿಂಕೊ ಗೊಟೊಹ್, ಫ್ರಾನ್ಸ್‍ನ ಚಿತ್ರ ಸಂಪಾದಕ ಪಸ್ಕಾಲೆ ಚವನ್ಸೆ ಹಾಗೂ ಫ್ರೆಂಚ್ ಸಾಕ್ಷ್ಯಚಿತ್ರ ತಯಾರಿಕ ಜೇವಿಯರ್ ಆಂಗುಲೋ ಬರ್ಟುರೆನ್, ಹೇಳಿಕೆ ನಿಡಿ  ಸೇನ್ ಅವರ ಮಾತುಗಳನ್ನು ಒಪ್ಪಿಲ್ಲ ಹಾಗೂ ನಡಾವ್ ಲಪಿದ್ ಅವರು ತೀರ್ಪುಗಾರರ ಮಂಡಳಿಯ ಪರ ಹೇಳಿಕೆ ನೀಡಿದ್ದರು ಎಂದಿದ್ದಾರೆ

ಈ ಕುರಿತು ಜಿಂಕೊ ಗೊಟೊಹ್ ಪೋಸ್ಟ್ ಒಂದನ್ನು ಮಾಡಿದ್ದು ಅದರಲ್ಲಿ ಮೂರು ತೀರ್ಪುಗಾರರ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. "ನಡಾವ್ ಆವರ ಹೇಳಿಕೆ ಬೆಂಬಲಿಸುತ್ತೇವೆ. ನಾವು ಚಿತ್ರದ ವಿಷಯದ ಬಗ್ಗೆ ರಾಜಕೀಯ ನಿಲುವು ತಳೆದಿಲ್ಲ. ನಾವು ಕಲೆಯ ದೃಷ್ಟಿಕೋನದಿಂದ ಹೇಳಿದ್ದೆವು. ಆದರೆ ಚಲನಚಿತ್ರೋತ್ಸವದ ವೇದಿಕೆಯನ್ನು ರಾಜಕಾರಣಕ್ಕಾಗಿ ಮತ್ತು ನಡಾವ್ ಆವರ ಮೇಲೆ ವೈಯಕ್ತಿಕ ಟೀಕೆಗೆ ಬಳಸುತ್ತಿರುವುದು ಬೇಸರ ತಂದಿದೆ. ಇದು ತೀರ್ಪುಗಾರರ ಉದ್ದೇಶವಾಗಿರಲಿಲ್ಲ,'' ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Similar News