2021ರ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ ಪ್ರಶಸ್ತಿ? ‍ಪಟ್ಟಿ ಇಲ್ಲಿದೆ...

ಸಾಧಕರಿಗೆ ಡಿ.6ರಂದು ಪ್ರಶಸ್ತಿ ಪ್ರದಾನ; ಸಚಿವ ನಾರಾಯಣಗೌಡ

Update: 2022-12-05 15:09 GMT

ಬೆಂಗಳೂರು, ಡಿ. 5: ರಾಜ್ಯ ಸರಕಾರದಿಂದ ಕ್ರೀಡಾ ಸಾಧಕರಿಗೆ ಕೊಡಮಾಡುವ ಕ್ರೀಡಾ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ನಾಳೆ(ಡಿ.6)ರಂದು ರಾಜಭವನದಲ್ಲಿ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ರೇಶ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

ರಾಜ್ಯ ಸರಕಾರವು ಕ್ರೀಡಾ ಕ್ಷೇತ್ರದಲ್ಲಿ ಮಹೋನ್ನತವಾದ ಸಾಧನೆಗೈದ ರಾಜ್ಯದ ಕ್ರೀಡಾಪಟುಗಳಿಗೆ ‘ಏಕಲವ್ಯ ಪ್ರಶಸ್ತಿ’, ಕರ್ನಾಟಕ ಕ್ರೀಡಾ ರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಏಕಲವ್ಯ ಪ್ರಶಸ್ತಿಗೆ 15, ಕ್ರೀಡಾ ರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆ ಪ್ರಶಸ್ತಿಗೆ 6 ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಮೂರು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

► 2021ನೆ ಸಾಲಿನ ಏಕಲವ್ಯ ಪ್ರಶಸ್ತಿ ಪುರಸ್ಕೃರು: ಚೇತನ್ ಬಿ-ಅಥ್ಲೆಟಿಕ್ಸ್, ಶಿಖಾ ಗೌತಮ್- ಬ್ಯಾಡ್ಮಿಂಟನ್, ಕೀರ್ತಿ ರಂಗಸ್ವಾಮಿ-ಸೈಕ್ಲಿಂಗ್, ಅದಿತ್ರಿ ವಿಕ್ರಾಂತ್ ಪಾಟೀಲ್- ಫೆನ್ಸಿಂಗ್,  ಅಮೃತ್ ಮುದ್ರಾಬೆಟ್- ಜಿಮ್ನಾಸ್ಟಿಕ್, ಶೇಷೇಗೌಡ-ಹಾಕಿ, ರೇಷ್ಮಾ ಮರೂರಿ- ಲಾನ್ ಟೆನ್ನಿಸ್, ಟಿಜೆ ಶ್ರೀಜಯ್- ಶೂಟಿಂಗ್, ತನೀಷ್ ಜಾರ್ಜ್ ಮ್ಯಾಥ್ಯೂ-ಈಜು.

ಯಶಸ್ವಿನಿ ಘೋರ್ಪಡೆ- ಟೇಬಲ್ ಟೆನ್ನಿಸ್, ಹರಿಪ್ರಸಾದ್ - ವಾಲಿಬಾಲ್, ಸೂರಜ್ ಸಂಜು ಅಣ್ಣಿಕೇರಿ- ಕುಸ್ತಿ, ಎಚ್.ಎಸ್. ಸಾಕ್ಷತ್-ನೆಟ್ ಬಾಲ್, ಮನೋಜ್ ಬಿ.ಎಂ- ಬ್ಯಾಸ್ಕೆಟ್ ಬಾಲ್ ಹಾಗೂ ರಾಘವೇಂದ್ರ ಎಂ- ಪ್ಯಾರಾ ಅಥ್ಲೆಟಿಕ್ಸ್.

► 2021ನೆ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು: ಅಲ್ಕಾ ಎನ್ ಪಡುತಾರೆ- ಸೈಕ್ಲಿಂಗ್, ಬಿ ಆನಂದ್ ಕುಮಾರ್- ಪ್ಯಾರಾ ಬ್ಯಾಡ್ಮಿಂಟನ್, ಶೇಖರಪ್ಪ-ಯೋಗ, ಅಶೋಕ್ ಕೆ.ಸಿ-ವಾಲಿಬಾಲ್, ರವೀಂದ್ರ ಶೆಟ್ಟಿ- ಕಬಡ್ಡಿ ಹಾಗೂ ಬಿ.ಜೆ.ಅಮರನಾಥ್-ಯೋಗ.

► 2021ನೆ ಸಾಲಿನ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ: ಕವನಾ ಎಂ.ಎಂ-ಬಾಲ್ ಬ್ಯಾಡ್ಮಿಂಟನ್, ಬಿ. ಗಜೇಂದ್ರ-ಗುಂಡು ಎತ್ತುವುದು, ಶ್ರೀಧರ್-ಕಂಬಳ, ರಮೇಶ್ ಮಳವಾಡ್-ಖೋಖೋ, ವೀರಭದ್ರ ಮುಧೋಳ್-ಮಲ್ಲಕಂಬ, ಖುಷಿ ಎಚ್-ಯೋಗ, ಲೀನಾ ಅಂತೋಣಿ ಸಿದ್ದಿ- ಮಟ್ಟಿ ಕುಸ್ತಿ ಹಾಗೂ ದರ್ಶನ್-ಕಬ್ಬಡಿ.

► 2021-23ನೆ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ: ಬಿ.ಎಂ.ಎಸ್. ಮಹಿಳಾ ಕಾಲೇಜು- ಬೆಂಗಳೂರು ನಗರ ಜಿಲ್ಲೆ, ಮಂಗಳ ಫ್ರೆಂಡ್ಸ್ ಸರ್ಕಲ್-ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನಿಟ್ಟೆ ಎಜುಕೇಷನ್ ಟ್ರಸ್ಟ್-ಉಡುಪಿ.

'ಏಕಲವ್ಯ ಪ್ರಶಸ್ತಿಯು ಏಕಲವ್ಯನ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ, ಸಮವಸ್ತ್ರ ಮತ್ತು 2ಲಕ್ಷ ರೂ.ನಗದು, ಜೀವಮಾನ ಸಾಧನೆ ಪ್ರಶಸ್ತಿಯು ಪ್ರಶಸ್ತಿ ಫಲಕ, ಸಮವಸ್ತ್ರ ಮತ್ತು 1.50ಲಕ್ಷ ರೂ.ನಗದು, ಕ್ರೀಡಾ ರತ್ನ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸಮವಸ್ತ್ರ ಮತ್ತು 1ಲಕ್ಷ ರೂ.ನಗದು ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 5ಲಕ್ಷ ರೂ.ಗಳ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.'

-ಡಾ.ನಾರಾಯಣಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ

Similar News