ಚಿತ್ರದುರ್ಗ: ವೈದ್ಯೆ ಅನುಮಾನಾಸ್ಪದ ಸಾವು

Update: 2022-12-06 06:48 GMT

ಚಿತ್ರದುರ್ಗ, ಡಿ.6: ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಅವರ ಮೃತದೇಹ ಅವರ ವಿ.ಪಿ. ಬಡಾವಣೆಯ ಮನೆಯಲ್ಲಿ ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ  ಪತ್ತೆಯಾಗಿದೆ. 

ಡಾ.ಕೆ.ಜಿ.ರವಿ ಎಂಬವರ ಪತ್ನಿ ರೂಪಾ (50) ಅವರು,  ಸೋಮವಾರ ಬೆಳಿಗ್ಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮನೆಯ ಕೆಲಸಗಾರರು ಗಮನಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಡಾ.ಕೆ.ಜಿ.ರವಿ ಪರಿಶೀಲಿಸಿದಾಗ ಪತ್ನಿ ಮೃತಪಟ್ಟಿದ್ದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆ ಶಂಕೆ: 'ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ ಅವರು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವರ ಮೃತ ದೇಹ ಬಳಿ ಡೆತ್ ನೋಟ ಒಂದು ಪತ್ತೆಯಾಗಿದೆ. ತನಿಖೆ ಪ್ರಗತಿಯಲ್ಲಿರುವ ಕಾರಣಕ್ಕೆ ಡೆತ್‌ನೋಟ್‌ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಚಿತ್ರದುರ್ಗ ಎಸ್​ಪಿ ಕೆ ಪರಶುರಾಮ್​ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ಮಹಾರಾಷ್ಟ್ರ ಸಚಿವರಿಬ್ಬರಿಗೆ ಪ್ರವೇಶಕ್ಕೆ ನಿರ್ಬಂಧ; ಬೆಳಗಾವಿ ಗಡಿ ಭಾಗದಲ್ಲಿ ಬಿಗಿ ‌ಪೊಲೀಸ್ ಬಂದೋಬಸ್ತ್

Similar News