ಶಿರಾಳಕೊಪ್ಪ | 'CFI ಸೇರಿರಿ' ಗೋಡೆಬರಹ ಒಂದೆರಡು ತಿಂಗಳ ಹಳೆಯದು: ಪೊಲೀಸರ ಮಾಹಿತಿ

Update: 2022-12-06 07:26 GMT

ಶಿವಮೊಗ್ಗ, ಡಿ.6: ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(CFI) ಸಂಘಟನೆಗೆ ಸೇರಿಕೊಳ್ಳಿ ಎಂಬ ಗೋಡೆಬರಹ  ಒಂದೆರಡು ತಿಂಗಳ ಹಳೆಯದು ಎಂದು ಶಿವಮೊಗ್ಗ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಪ್ರಕರಣದ ತನಿಖೆ ವೇಳೆ ಗಣೇಶ ಮೂರ್ತಿ ಮೆರವಣಿಗೆಯ ಹಳೆಯ ವಿಡಿಯೋಗಳನ್ನು ಪರಿಶೀಲಿಸಿದಾಗ ಸೆಪ್ಟೆಂಬರ್‌ಗೂ ಮುನ್ನವೇ ಈ ಗೋಡೆಬರಹಗಳು ಬರೆದಿರುವುದು ಕಂಡು ಬಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. 

ಇತ್ತೀಚೆಗೆ  ಪೊಲೀಸ್ ಗುಪ್ತಚರ ವಿಭಾಗದ ಸಿಬ್ಬಂದಿಯೊಬ್ಬರು ಈ ಗೋಡೆಬರಹಗಳನ್ನು ಗಮನಿಸಿದ್ದು, ಪಟ್ಟಣದ 9ಕ್ಕೂ ಹೆಚ್ಚು ಕಡೆ ಗೋಡೆಗಳ ಮೇಲೆ ಸಿಎಫ್ಐ ಸೇರಿ ಎಂಬ ಬರಹಗಳು ಪತ್ತೆಯಾಗಿದ್ದವು. ನಂತರ ಅವರ ದೂರಿನ ಆಧಾರದ ಮೇಲೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.

Similar News