ಗ್ರಾಮ ಪಂಚಾಯತ್ ಸದಸ್ಯ ಆತ್ಮಹತ್ಯೆ

Update: 2022-12-06 14:04 GMT

ಚಾಮರಾಜನಗರ, ಡಿ.6: ಗ್ರಾಮ ಪಂಚಾಯತ್ ಸದಸ್ಯನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಿಂದ ವರದಿಯಾಗಿದೆ.

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಮಣಿಕಂಠನಾಯಕ(34) ಆತ್ಮಹತ್ಯೆ ಮಾಡಿಕೊಂಡಿರುವ ಗ್ರಾಪಂ ಸದಸ್ಯ ಎಂದ ತಿಳಿದು ಬಂದಿದೆ.

ಡಿಸೆಂಬರ್​ 3ರಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಲಾಡ್ಜ್ ನಲ್ಲಿ  ವಾಸ್ತವ್ಯ ಹೂಡಿದ್ದ ಮಣಿಕಂಠನಾಯಕ ಸೋಮವಾರ ತಡರಾತ್ರಿ ಲಾಡ್ಜ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಆತ್ಮಹತ್ಯೆಗೆ ಕಾರಣ ಏನು ಎಂಬುದರ ಕುರಿತು ತಿಳಿಯಲು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Similar News